
ಕಾರವಾರ: ದನ ಕಳ್ಳತನ ಮಾಡಿದರೆ, ಇನ್ನು ಮುಂದೆ ಕಠಿಣ ಕ್ರಮವನ್ನೇ ತೆಗೆದುಕೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ. “ದನಗಳನ್ನು ಕಳ್ಳತನ ಮಾಡಿದವರನ್ನು ಹಿಡಿದು, ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದ್ದು, ಕಾನೂನು ಉಲ್ಲಂಘಿಸಿದವರನ್ನು ಹೇಗೆ ಶಿಕ್ಷಿಸಿದ್ದೇವೆ ಎಂಬುದನ್ನು ಸಮಾಜ ಕಂಡಿದೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಮುಂದೆ ದನ ಕಳ್ಳತನ ಮಾಡಿದರೆ, ನಾವು ಅವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಲು ತಯಾರಾಗಿದ್ದೇವೆ” ಎಂದು ಅವರು ಎಚ್ಚರಿಕೆ ನೀಡಿದರು.
“ಕುಮಟಾ ಶಾಸಕ ದಿನಕರ ಶೆಟ್ಟಿಯವರು ಮುಖ್ಯ ಮಂತ್ರಿ ,ಗ್ರಹ ಸಚಿವರ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ದನಗಳ್ಳರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು.