ಯಲ್ಲಾಪುರ: ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಕೊಲೆ; ಪಟ್ಟಣದಲ್ಲಿ ಉದ್ವಿಗ್ನತೆ, ಇಂದು ಬಂದ್

Date:

spot_img

ಯಲ್ಲಾಪುರ: ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಮಧ್ಯಾಹ್ನ ಹಾಡಹಗಲೇ ಅಮಾನವೀಯ ಘಟನೆಯೊಂದು ಜರುಗಿದೆ. ಪ್ರೀತಿಯ ಹೆಸರಿನಲ್ಲಿ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಆಸೆಗೆ ಒಪ್ಪದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಘಟನೆಯ ವಿವರ: ಮೃತಪಟ್ಟ ದುರ್ದೈವಿ ರಂಜಿತಾ ಬನ್ಸೊಡೆ (30) ಅವರು ಸ್ಥಳೀಯ ಶಾಲೆಯೊಂದರಲ್ಲಿ ಬಿಸಿಯೂಟದ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಿಚ್ಛೇದಿತರಾಗಿದ್ದ ರಂಜಿತಾ ಅವರಿಗೆ 10 ವರ್ಷದ ಮಗುವಿದ್ದು, ಅಕ್ಕನ ಮನೆಯಲ್ಲಿ ಆಸರೆ ಪಡೆದಿದ್ದರು. ಆರೋಪಿ ರಫೀಕ್ ಎಂಬಾತ ಕಳೆದ ಕೆಲವು ಸಮಯದಿಂದ ರಂಜಿತಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶನಿವಾರ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಳಮ್ಮನಗರದ ಬಳಿ ರಫೀಕ್ ಆಕೆಯನ್ನು ಅಡ್ಡಗಟ್ಟಿ, ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಂಜಿತಾಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ.

ಪ್ರತಿಭಟನೆ ಮತ್ತು ಬಂದ್ ಕರೆ: ಈ ಕೃತ್ಯದ ಸುದ್ದಿ ಹರಡುತ್ತಿದ್ದಂತೆಯೇ ಪಟ್ಟಣದಲ್ಲಿ ಆಕ್ರೋಶದ ಅಲೆ ಎದ್ದಿದೆ. ಆರೋಪಿ ರಫೀಕ್‌ನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿವೆ. ಘಟನೆಯನ್ನು ಖಂಡಿಸಿ ಜನವರಿ 4ರ ಭಾನುವಾರ ಯಲ್ಲಾಪುರ ಬಂದ್‌ಗೆ ಕರೆ ನೀಡಲಾಗಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸದ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಮಾರುಕಟ್ಟೆಗೆ ಕಾಲಿಟ್ಟ ಬೋಟ್‌ನ ಹೊಸ ಪ್ರೀಮಿಯಂ ಹೆಡ್‌ಫೋನ್

ಬೋಟ್ ಕಂಪನಿಯು 80 ಗಂಟೆಗಳ ಬ್ಯಾಟರಿ ಹಾಗೂ 45dB ಹೈಬ್ರಿಡ್ ANC ಬೆಂಬಲಿಸುವ ಪ್ರೀಮಿಯಂ ನಿರ್ವಾಣ ಯುಟೋಪಿಯಾ 2 ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ದಿನ ವಿಶೇಷ – ಆದಾಯ ತೆರಿಗೆ ದಿನ

ಭಾರತದಲ್ಲಿ ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಪ್ರಾಮುಖ್ಯತೆ ಮತ್ತು ITR ಸಲ್ಲಿಕೆಯ ಕುರಿತು ವಿವರ ಇಲ್ಲಿದೆ.

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ