spot_img

ಕಾಸರಗೋಡು: ಕುಡಿದು ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಬಂಧನ

Date:

ಕಾಸರಗೋಡು: ಶಾಲೆಯ ಮುಖ್ಯೋಪಾಧ್ಯಾಯಿನಿ ಮದ್ಯಪಾನ ಮಾಡಿದ ನಂತರ ವಾಹನ ಚಲಾಯಿಸಿದ ಆರೋಪದಲ್ಲಿ ಪ್ಲೋಯ್ಸರು ಬಂಧಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ ಕಾಂಞಗಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ, ಐಂಬೋತ್ ಪ್ರದೇಶದಲ್ಲಿ ಒಂದು ಕಾರು ಅಧಿಕ ವೇಗದಲ್ಲಿ ಬರುತ್ತಿರುವುದನ್ನು ಗಮನಿಸಿದರು. ಅದನ್ನು ತಡೆದು ನಿಲ್ಲಿಸಿದ ನಂತರ, ಚಾಲಕಿಯನ್ನು ಲೇಸರ್ ಮೂಲಕ ಪರೀಕ್ಷಿಸಿದಾಗ ಅವರು ಮದ್ಯಪಾನ ಮಾಡಿದ್ದಾರೆಂದು ಖಚಿತವಾಗಿ ತಿಳಿದುಬಂದಿದೆ.

ಹೆಚ್ಚಿನ ತನಿಖೆಯಲ್ಲಿ, ಆಕೆ ಜಿಲ್ಲೆಯ ಒಂದು ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವುದು ಬೆಳಕಿಗೆ ಬಂದಿದೆ. ಮದ್ಯಪಾನದ ನಂತರ ವಾಹನ ಚಲಾಯಿಸಿದ ಆರೋಪದೊಂದಿಗೆ ಪೊಲೀಸರು ಅವರನ್ನು ಬಂಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಅನಿಯಮಿತ ವೇಗದಲ್ಲಿ ಚಲಿಸುತ್ತಿದ್ದ ಕಾರನ್ನು ಸಹ ಪೊಲೀಸರು ಜಪ್ತೆ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧವೆಂದು ಪೊಲೀಸರು ಜನರಿಗೆ ಜಾಗೃತಿ ಮೂಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿತ್ಯ ಸರಿಯಾದ ಪ್ರಮಾಣದ ನೀರು ಕುಡಿದರೆ 5 ಕೆಜಿ ತೂಕ ಕಡಿಮೆ ಮಾಡಬಹುದು

ಇತ್ತೀಚಿನ ಸಂಶೋಧನೆಗಳು ಪ್ರತಿದಿನ ಸಾಕಷ್ಟು ನೀರು ಸೇವಿಸುವುದರಿಂದ ವಾರಕ್ಕೆ 5 ಕೆಜಿ ವರೆಗೆ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿವೆ

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಅತ್ಯಾಚಾರ: ರಾಜಕೀಯ ನಾಯಕ ಸೇರಿದಂತೆ 5 ಜನ ಬಂಧನ

21 ವರ್ಷದ ಹಿಂದೂ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ಥಳೀಯ ರಾಜಕಾರಣಿ ಸೇರಿದಂತೆ 5 ಸಂದೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ಬ್ಲಾಕ್ ಯುವ ಕಾಂಗ್ರೆಸ್ ನ ಹೊಸ ನಾಯಕತ್ವದ ಪದಗ್ರಹಣ

ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಂಸ್ಥೆಯ ಹೊಸ ನಾಯಕತ್ವವು ಶನಿವಾರದಂದು ಕಾಪು ರಾಜೀವ ಭವನದಲ್ಲಿ ಅಧಿಕಾರವನ್ನು ವಹಿಸಿಕೊಂಡಿತು

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಮತ್ತು ಹಲವು ಸಂಘಟನೆಗಳ ಸಹಭಾಗಿತ್ವದೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ ಆಶ್ರಯದಲ್ಲಿ ಶಾಂತಿ ಯುವಕ ಮಂಡಲ ಜಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಗ್ರಾಮ ಸಂರಕ್ಷಣಾ ಸಮಿತಿ ಬೈಲೂರು, ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘ ಬೈಲೂರ್,ಹಾಗೂ ಓಂ ಶಕ್ತಿ ಫ್ರೆಂಡ್ಸ್ ನೀರೆ ಕೆರೆ ಪಲ್ಕೆ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ಯಶಸ್ವಿಯಾಗಿ ನಡೆಯಿತು.