spot_img

ಮೊಬೈಲ್ ಗೀಳಿಗೆ ಬಲಿಯಾದ ಬಾಲಕ! ತಂಗಿಯ ಮುಂದೆಯೇ ನೇಣು ಬಿಗಿದು ಆತ್ಮಹತ್ಯೆ…

Date:

ಬೆಂಗಳೂರು, ಜನವರಿ.29: ಮೊಬೈಲ್ ಗೀಳು ಅಂಟಿಸಿಕೊಂಡ 13 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ.

ಗೊಲ್ಲರಹಟ್ಟಿಯ ನಿವಾಸಿ ಧ್ರುವ(13) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ತನ್ನ 9 ವರ್ಷದ ತಂಗಿಯ ಮುಂದೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದೆ ತಂಗಿ ಸುಮ್ಮನೆ ನೋಡುತ್ತಿದ್ದಳು.

ಮಂಗಳವಾರ ಪೋಷಕರು ಕೆಲಸಕ್ಕೆ ತೆರಳಿದ್ದು ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಬಾಲಕ ಸೊಂಟದ ಉಡದಾರವನ್ನು ಫ್ಯಾನ್‌ಗೆ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಅಷ್ಟರಲ್ಲಿ ಮನೆಗೆ ಬಂದ ತಾಯಿ ಘಟನೆ ನೋಡಿ ಆತಂಕಗೊಂಡು ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡುತ್ತಿದ್ದು, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕ ಅತಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಇದೇ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.