
ಚಿಕ್ಕೋಡಿ: ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಒಬ್ಬ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ಹೃದಯಸ್ಪರ್ಶಿ ಮನವಿ ಸೇರಿಸಿದ್ದು, “ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ” ಎಂದು ಬರೆದಿದ್ದಾರೆ.
ಹಾಗೆಯೇ 500 ರೂಪಾಯಿ ನೋಟು ಸೇರಿಸಿ, “ಸರ್, ಈ ಹಣದಿಂದ ಚಹಾ ಕುಡಿಯಿರಿ. ನನ್ನನ್ನು ಪಾಸ್ ಮಾಡಿ” ಎಂದು ಬರೆದಿದ್ದು ಮೌಲ್ಯಮಾಪಕರನ್ನು ಆಶ್ಚರ್ಯಕ್ಕೀಡು ಮಾಡಿದೆ. “ನೀವು ಪಾಸ್ ಮಾಡದಿದ್ದರೆ ನನ್ನ ಪೋಷಕರು ಕಾಲೇಜಿಗೆ ಕಳುಹಿಸುವುದಿಲ್ಲ” ಎಂಬ ಭಾವನಾತ್ಮಕ ಸಂದೇಶಗಳನ್ನು ಬರೆದಿದ್ದಾರೆ.