
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿ ಕುದಿಗ್ರಾಮದಲ್ಲಿ ತಾ. 04 ಫೆಬ್ರವರಿಯಂದು ರಥಸಪ್ತಮಿಯ ದಿನ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಮತ್ತು ರಂಗ ಪೂಜೆಯು ನಡೆಯಲಿದೆ ಹಾಗೂ ಆ ದಿನ ನಡೆಯುವ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ರಂಗಪೂಜೆ ಮತ್ತು ಭೂತ ಬಲಿ ಇತ್ಯಾದಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಕ್ಷೇತ್ರದ ಅಭಿಮಾನಿಗಳಾದ ಊರ-ಪರವೂರ ಭಕ್ತರೆಲ್ಲರೂ ಆಗಮಿಸಿ ಕಾರ್ಯಕ್ರಮಗಳನ್ನು ಚಂದಗಾಣಿಸಿಕೊಟ್ಟು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕರು, ಕಾರ್ಯದರ್ಶಿಗಳು, ತಂತ್ರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

