
ಇರ್ವತ್ತೂರು: ಶ್ರೀ ವೇಣುಗೋಪಾಲ ಕೃಷ್ಣ ಭಜನಾ ಮಂಡಳಿ, ಕೊಳಕೆ ಇರ್ವತ್ತೂರು ವತಿಯಿಂದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಭಜನಾ ಮಂಡಳಿಯ ಸ್ಥಾಪಕ ಅಧ್ಯಕ್ಷ ರಾಜೇಂದ್ರ ಪೂಜಾರಿ ಮತ್ತು ಅಧ್ಯಕ್ಷೆ ಅನಿತಾ ಶೆಟ್ಟಿ ಅವರ ಸಾರಥ್ಯದಲ್ಲಿ ಊರಿನ ಗಣ್ಯರ ಸಹಾಯದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಜಯಕೀರ್ತಿ ಕಡಂಬ ಕೊಳಕೆ , ಉದಯ್ ಎಸ್. ಕೋಟ್ಯಾನ್, ಶ್ರೀಕಾಂತ್ ಪ್ರಭು ಪಳ್ಳಿ, ಶೇಖರ್ ಅಂಚನ್, ರಾಜೇಂದ್ರ ಪೂಜಾರಿ, ಗೋಪಾಲ ಪೂಜಾರಿ ಗರಡಿ ಮನೆ, ಶಂಕರ್ ಪೂಜಾರಿ ಐದ್ಲೂರ್, ಸತೀಶ್ ಮಿತ್ತೊಟ್ಟು, ಶೇಖರ್ ಕೋಟ್ಯಾನ್, ಅನಿತಾ ಶೆಟ್ಟಿ, ನಿತಿನ್ ಶೆಟ್ಟಿ, ನಳಿನಾಕ್ಷಿ ಸೇರಿದಂತೆ ಭಜನಾ ಮಂಡಳಿಯ ಮಕ್ಕಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಭಜನಾ ಮಂಡಳಿಯ ಮಕ್ಕಳು ಸ್ವಾಗತ ಕೋರಿದರು ಮತ್ತು ನಿತಿನ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
































