
ಕಾರ್ಕಳ: ಬಂಟರ ಸೇವಾ ಸಂಘ (ರಿ), ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇದರ ನೇತೃತ್ವದಲ್ಲಿ 10ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ದಿನಾಂಕ 08-08-2025 ಶುಕ್ರವಾರದಂದು ಶ್ರೀ ದೇವಿ ಕೃಪಾ ಸಭಾಭವನದಲ್ಲಿ ವೈಭವದಿಂದ ನಡೆಯಲಿದೆ.
ಭಾಗಿಯಾಗಲಿರುವ ಗಣ್ಯರು
ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಂತಿ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅಕ್ಷತಾ ವಿ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ (ಅಧ್ಯಕ್ಷರು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್), ರಾಕೇಶ್ ಶೆಟ್ಟಿ (ಎಂ.ಡಿ., ಪವರ್ ಟಿವಿ), ವಿಜಯ ಶೆಟ್ಟಿ (ಸಂಚಾಲಕರು, ಬಂಟರಯಾನೆ ನಾಡವರ ಮಾತೃ ಸಂಘ, ಕಾರ್ಕಳ ವಲಯ), ಶ್ರೀ ಅಮೃತ್ ರೈ ಸಹಸಂಸ್ಥಾಪಕರು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ , ಶ್ರೀ ಜನನಿ ಚಂದ್ರಶೇಖರ ಶೆಟ್ಟಿ ಕುಕ್ಕುಂದೂರು, ವಚನ ಹಾಸ್ಪಿಟಲಿಟಿ ಸರ್ವಿಸ್ ಮುಂಬಯಿ, ಶ್ರೀ ಸೋಮನಾಥ ಶೆಟ್ಟಿ ನಕ್ರೆ ಕುಕ್ಕುಂದೂರು – ಉದ್ಯಮಿ ಮುಂಬೈ ,ಶ್ರೀಮತಿ ದೇವಿಕಾ ರೈ ಕುಪ್ಪಬೆಟ್ಟು ಕುಕ್ಕುಂದೂರು, ಶ್ರೀ ಸಂದೀಪ್ ಶೆಟ್ಟಿ ಉದ್ಯಮಿಗಳು ಮಣಿಪಾಲ , ಶ್ರೀಮತಿ ಉಷಾರಾಣಿ ರೈ ಗೌರವಾಧ್ಯಾಕ್ಷರು ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘ, ಶ್ರೀ ಮುತ್ತಯ್ಯ ನಾಯಿಕ್ ಗೌರವಾಧ್ಯಕ್ಷರು ಬಂಟರ ಸೇವಾ ಸಂಘ ಕುಕ್ಕುಂದೂರು , ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ , ಶ್ರೀ ಕೆ ರವಿ ಶೆಟ್ಟಿ ನಿಕಟಪೂರ್ವ ಅಧ್ಯಕ್ಷರು ಕುಕ್ಕುಂದೂರು – ನಿರ್ದೇಶಕರು ಬಂಟರ ಯಾನೆ ನಾಡವರ ಮಾತ್ರ ಸಂಘ ಮಂಗಳೂರು , ಶ್ರೀ ಭರತ್ ಶೆಟ್ಟಿ ಗೌರವಾಧ್ಯಕ್ಷರು ಬಂಟರ ಸೇವಾ ಸಂಘ ಕುಕ್ಕುಂದೂರು , ಶ್ರೀ ಯುವರಾಜ್ ಶೆಟ್ಟಿ ಗೌರವ ಸಲಹೆಗಾರರು ಬಂಟರ ಸೇವಾ ಸಂಘ ಕುಕ್ಕುಂದೂರು ಹಾಗೂ ಇತರ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರ
ಬೆಳಿಗ್ಗೆ 8.30 ರಿಂದ 9.00 ರವರೆಗೆ: ಪೂಜಾ ವ್ರತಧಾರಿಗಳ ನೋಂದಣಿ
ಬೆಳಿಗ್ಗೆ 9.00 ರಿಂದ 11.00 ರವರೆಗೆ: ವರಮಹಾಲಕ್ಷ್ಮಿ ವ್ರತ ಪೂಜೆ
ಬೆಳಿಗ್ಗೆ 11.00 ರಿಂದ: ಸಭಾ ಕಾರ್ಯಕ್ರಮ, ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ
ಮಧ್ಯಾಹ್ನ 12.30 ರಿಂದ: ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆ
ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುವ ಮಾತೆಯರು ಬೆಳಿಗ್ಗೆ 8.30ಕ್ಕೆ ಹಾಜರಿರಬೇಕು. ಪೂಜಾ ಸಾಮಗ್ರಿಗಳನ್ನು ಸಮಿತಿಯ ವತಿಯಿಂದ ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.