
ಹೆಬ್ರಿ : ಹೆಬ್ರಿ ಇಂದಿರಾನಗರದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮೇ 20, 2025, ಮಂಗಳವಾರ ರಾತ್ರಿ 9 ಗಂಟೆಗೆ ಶ್ರೀ ಸ್ವಾಮಿ ಕೊರಗಜ್ಜನ ದ್ವಿತೀಯ ವರ್ಷದ ಕೋಲ ಸೇವೆ ಜರಗಲಿದೆ. ಈ ಪ್ರಯುಕ್ತ ಮಹಾಪೂಜೆ, ಭಜನೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಬಂದು ಶ್ರೀ ಕೊರಗಜ್ಜ ಸ್ವಾಮಿಯ ಅನುಗ್ರಹ ಪಡೆಯುವಂತೆ ಶ್ರೀ ಸ್ವಾಮಿ ಕೊರಗಜ್ಜ ಆರಾಧಕರಾದ ಸಂತೋಷ್ ಸ್ವಾಮಿ ಅವರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ವಿವರ:
🔸 ಬೆಳಿಗ್ಗೆ 8:00 – ಗಣಹೋಮ
🔸 ಬೆಳಿಗ್ಗೆ 10:00 – 1001 ಸೀಯಾಳ ಅಭಿಷೇಕ (ಬೊಂಡ ಅಭಿಷೇಕ)
🔸 ಮಧ್ಯಾಹ್ನ 12:30 – ಮಹಾಪೂಜೆ ಹಾಗೂ ಪ್ರಸಾದ ವಿತರಣೆ
🔸 ಸಂಜೆ 6:00 – ಭಜನೆ
🔸 ರಾತ್ರಿ 8:00 – ಮಹಾಪೂಜೆ ಹಾಗೂ ಪ್ರಸಾದ ವಿತರಣೆ
🔸 ರಾತ್ರಿ 8:30 – ಸಾರ್ವಜನಿಕ ಅನ್ನಸಂತರ್ಪಣೆ
🔸 ರಾತ್ರಿ 9:00 – ಶ್ರೀ ಸ್ವಾಮಿ ಕೊರಗಜ್ಜ ಕೋಲ ಸೇವೆ
ಭಕ್ತಾಧಿಗಳು ಬೊಂಡ ಅಥವಾ ಸೀಯಾಳವನ್ನು ಅಭಿಷೇಕಕ್ಕೆ ನೀಡಬಹುದು. ಊರಪರವೂರ ಕೊರಗಜ್ಜ ಭಕ್ತರು ತಮ್ಮ ಯಥಾಶಕ್ತಿ ತನು-ಮನ-ಧನ ಸಹಾಯ ನೀಡಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಪ್ರತಿ ತಿಂಗಳು ಹರಕೆಯ ಅಗೆಲು ಸೇವೆ ನಡೆಯುತ್ತದೆ.
ಹೆಚ್ಚಿನ ಮಾಹಿತಿಗೆ:
📞 9741847983 / 9449712251