
ಕೊಂಡಾಡಿ : ಶ್ರೀರಾಮ ಭಜನಾ ಮಂಡಳಿಯ 51 ನೇ ವರ್ಷದ ಭಜನಾ ಮಂಗಲೋತ್ಸವದ ಪ್ರಯುಕ್ತ ಇಂದು ದಿನಾಂಕ -26/03/2025ನೇ ಬುಧವಾರ ಸಾಯಂಕಾಲ 7.00ರಿಂದ ನಿತ್ಯ ಭಜನೆ ಪ್ರಾರಂಭಗೊಂಡು ದಿನಾಂಕ -06/04/2025ನೇ ಆದಿತ್ಯವಾರ ಶ್ರೀ ರಾಮ ನವಮಿಯಂದು ಬೆಳಿಗ್ಗೆ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ತನಕ ಅಖಂಡ ಏಕಾಹ ಭಜನಾ ಮಂಗಲೋತ್ಸವ ನಡೆಯಲಿರುವುದು.
ಈ ದೇವತಾ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ರಾಮ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಶ್ರೀರಾಮ ಭಜನಾ ಮಂಡಳಿ, ಭಜನೆಕಟ್ಟೆ ಕೊಂಡಾಡಿ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.