
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ )ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ವಲಯದ ಗುರಿಪಳ್ಳ ಒಕ್ಕೂಟದ ಶ್ರೇಷ್ಠ ಸ್ವ -ಸಹಾಯ ಗುಂಪಿನ ಸದಸ್ಯರಾದ ರೇಖಾರವರ ಮಾವ ಪದ್ಮಯ್ಯ ನಾಯ್ಕ್ ಅನಾರೋಗ್ಯದಿಂದ ನಡೆದಾಡಲು ಕಷ್ಟವಾಗುತ್ತಿದ್ದು ಅವರ ಮನೆಗೆ ನಮ್ಮ ವಲಯದ ಮೇಲ್ವಿಚಾರಕರು ಭೇಟಿ ಮಾಡಿ ಅವರಿಗೆ ವೀಲ್ ಚೇರ್ ನ ಅವಶ್ಯಕತೆ ಇರುವುದನ್ನು ಮನಗಂಡು ಶ್ರೀ ಕ್ಷೇತ್ರಕ್ಕೆ ಮನವಿ ಮಾಡಿದ್ದು ಈ ದಿನ ಅವರಿಗೆ ಶ್ರೀ ಕ್ಷೇತ್ರದಿಂದ ಕೊಡಮಾಡಿದ ವೀಲ್ಚೇರ್ ನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ, ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಉಪಾಧ್ಯಕ್ಷರಾದ ಗೀತಾ, ಮೇಲ್ವಿಚಾರಕರಾದ ಉಷಾ, ಸೇವಾಪ್ರತಿನಿಧಿ ಪುಷ್ಪಾವತಿ ಉಪಸ್ಥಿತರಿದ್ದರು. ಮನೆಯವರೆಲ್ಲರು ಉಪಸ್ಥಿತರಿದ್ದು ಶ್ರೀ ಕ್ಷೇತ್ರದಿಂದ ವೀಲ್ ಚೇರ್ ಒದಗಿಸಿಕೊಟ್ಟಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.