
ಪ್ರಯಾಗರಾಜ್: ಮಹಾಕುಂಭಮೇಳದ ಸಂಭ್ರಮದ ಮಧ್ಯೆ, ಶ್ರೀ ಬ್ರಹ್ಮಾಂನಂದ ಸರಸ್ವತಿ ಸ್ವಾಮೀಜಿಯವರು ಕರ್ನಾಟಕದ ಮೊದಲ ಮಹಾ ಮಂಡಲೇಶ್ವರರಾಗಿ ಪ್ರಮಾಣಿತರಾಗಿದ್ದಾರೆ. ಜುನಾ ಅಖಾಡದ ಆಚಾರ್ಯ ಅವದೇಶಾನಂದ ಗಿರಿ ಮಹಾರಾಜರು, ಅವರು ಸಲ್ಲಿಸಿದ ಅಪಾರ ಸೇವೆ ಮತ್ತು ಧಾರ್ಮಿಕ ಉನ್ನತಿಗೆ ಗೌರವ ಸೂಚಿಸಿ, ಶ್ರೀ ಬ್ರಹ್ಮಾಂನಂದ ಸರಸ್ವತಿ ಸ್ವಾಮೀಜಿಯವರಿಗೆ ಪಟ್ಟಾಭಿಷೇಕವನ್ನು ನೆರವೇರಿಸಿದರು.
ಈ ಧಾರ್ಮಿಕ ಘಟನೆ, ಕರ್ನಾಟಕದಿಂದ ಬಂದ ಗುರು ಮತ್ತು ಅವರ ಸಾಧನೆಗಳನ್ನು ದೇಶಾದ್ಯಾಂತ ಒಪ್ಪಿಗೆಯಾಗಿ ಪರಿಗಣಿಸಿದ ಕ್ಷಣವಾಗಿದೆ. ಶ್ರೀ ಬ್ರಹ್ಮಾಂನಂದ ಸರಸ್ವತಿ ಸ್ವಾಮೀಜಿಯವರ ಈ ಪಟ್ಟಾಭಿಷೇಕ, ದೇಶದ ನಾಗಾ ಸನ್ಯಾಸಿ ಪರಂಪರೆಯಲ್ಲಿ ಪ್ರಮುಖ ಸ್ಥಾನ ಪಡೆದುದನ್ನು ಸಂಕೇತಿಸುತ್ತದೆ.