
ಕಾರ್ಕಳ ಮಾರ್ಚ್.25 : ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಸ್ಪೈನ್ ಸರ್ಜರಿ/ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಕ್ಲಿನಿಕ್ ಪರಿಚಯಿಸುತ್ತಿದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಆರ್ಥೋಪೆಡಿಕ್ಸ್ (ಸ್ಪೈನ್ ಸರ್ಜರಿ ಘಟಕ) ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಾಧವ ಪೈ ಅವರು, ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ , ಮಾರ್ಚ್ 27, 2025 ರಿಂದ ಪ್ರತೀ ತಿಂಗಳ 2ನೇ ಮತ್ತು 4ನೇ ಗುರುವಾರ, ಮಧ್ಯಾಹ್ನ 2:30 ರಿಂದ 4:30 ರವರೆಗೆ ಹೊರರೋಗಿ ಸಮಾಲೋಚನೆಗೆ ಲಭ್ಯರಿರುತ್ತಾರೆ.
ಸ್ಪೈನ್/ ಬೆನ್ನುಮೂಳೆಯ ಕಾಯಿಲೆಗಳಾದ ಡಿಜೆನೆರೇಟಿವ್ ಸ್ಪೈನ್ ರೋಗ, ಸ್ಪೈನ್ ವಕ್ರತೆಗಳು, ಗಾಯಗಳು, ಸೋಂಕುಗಳು ಮತ್ತು ಟ್ಯೂಮರ್‌ಗಳಂತಹ ವಿವಿಧ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸೆ ಲಭ್ಯವಿದ್ದು, ಫಿಸಿಯೊಥೆರಪಿ ಮತ್ತು ನೋವು ನಿರ್ವಹಣೆಯಂತಹ ಶಸ್ತ್ರಚಿಕಿತ್ಸೆಯಲ್ಲದ ವಿಧಾನಗಳಿಂದ ಹಿಡಿದು ಕನಿಷ್ಠ ಗಾಯದ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಸೇರಿದಂತೆ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ ಹೊಂದಿದ್ದಾರೆ. ಡಾ. ಮಾಧವ ಪೈ ಅವರ ಪರಿಣತಿ, ರೋಗಿಗಳಿಗೆ ಅತ್ಯುತ್ತಮ ಆರೈಕೆ ನೀಡಲು ಕೇಂದ್ರೀಕೃತವಾವಾಗಿದ್ದು, ದೀರ್ಘಕಾಲಿಕ ಆರೋಗ್ಯ ಮತ್ತು ಚೇತರಿಕೆಗೆ ಗಮನಹರಿಸುವುದರ ಜೊತೆಗೆ, ಚಿಕಿತ್ಸೆಯ ನಂತರದ ಆರೈಕೆ ಸೇವೆ ಸಹ ಒದಗಿಸುತ್ತದೆ.
“ಈ ಹೊಸ ಸೇವೆಯು ಸ್ಥಳೀಯ ಜನತೆಗೆ ದೂರದ ಪ್ರಯಾಣ ಮಾಡದೆಯೇ, ಸುಧಾರಿತ ಸೂಪರ್-ಸ್ಪೆಷಾಲಿಟಿ ಸೇವೆಗಳನ್ನು ಮನೆಬಾಗಿಲಲ್ಲೇ ಪಡೆಯಲು ಸಹಕಾರಿ ಆಗಿದೆ” ಎಂದು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, 9731601150/08258 – 230583 ಅನ್ನು ಸಂಪರ್ಕಿಸಬಹುದು.