
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರಾವಳಿ ಭಾಗದ ಸಾವಿರಾರು ಯಾತ್ರಾರ್ಥಿಗಳು ತೆರಳುವ ಹಿನ್ನೆಲೆಯಲ್ಲಿ, ಉಡುಪಿಯಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
📌 ರೈಲು ವೇಳಾಪಟ್ಟಿ:
ಹೋಗುವ ಸಂಚಾರ: ಫೆ.17, ಮಧ್ಯಾಹ್ನ 12.30 (ಉಡುಪಿ) → ಫೆ.19, ಬೆಳಗ್ಗೆ 6.30 (ಪ್ರಯಾಗ್‌ರಾಜ್)
ಮರುಪ್ರಯಾಣ: ಫೆ.20, ಸಂಜೆ 6.30 (ಪ್ರಯಾಗ್‌ರಾಜ್) → ಫೆ.22, ಸಂಜೆ (ಉಡುಪಿ)
ಈ ಕುರಿತಂತೆ ಕೊಂಕಣ್ ರೈಲ್ವೆ ಅಧಿಸೂಚನೆ ಹೊರಡಿಸಿದ್ದು, ರೈಲು ಸಂಖ್ಯೆ 01192/01191 ಎಂದು ಘೋಷಿಸಲಾಗಿದೆ. ಈ ವಿಶೇಷ ರೈಲು ವ್ಯವಸ್ಥೆಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
ಈ ಸೇವೆಯಿಂದ ಕರಾವಳಿ ಭಾಗದ ಯಾತ್ರಾರ್ಥಿಗಳಿಗೆ ಪ್ರಯಾಗ್‌ರಾಜ್‌ಗೆ ಪ್ರಯಾಣ ಸುಗಮವಾಗಲಿದೆ.