ಉಡುಪಿ ಪರ್ಯಾಯ ಅನುದಾನ ವಿವಾದ: ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ

Date:

spot_img

ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ಕೋರಿ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಅವರು ಸದನದಲ್ಲಿ ಮಂಡಿಸಿದ ಬೇಡಿಕೆಯನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಲಘುವಾಗಿ ಪರಿಗಣಿಸಿರುವುದು ಮತ್ತು ಹರಿಕಥೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಾಡ ಹಬ್ಬ ಮೈಸೂರು ದಸರಾ’ದಂತೆಯೇ ‘ಕರಾವಳಿ ಕರ್ನಾಟಕದ ನಾಡ ಹಬ್ಬ’ ಎಂದೆನಿಸಿರುವ ‘ಉಡುಪಿ ಪರ್ಯಾಯ’ಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಅನುದಾನದ ಬೇಡಿಕೆ ಇಟ್ಟಿರುವ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಅವರ ಮಾತನ್ನು ಹಗುರವಾಗಿ ಪರಿಗಣಿಸಿ, ಹಿಂದೂ ಧರ್ಮದ ಅಸ್ಮಿತೆಯ ಭಾಗವಾದ ಹರಿಕಥೆಯನ್ನು ತಿರಸ್ಕಾರ ಭಾವದಿಂದ ಉಲ್ಲೇಖಸಿ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುoಟುಮಾಡಿರುವ ವಿಧಾನಸಭಾ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌರವಾನ್ವಿತವಾದ ವಿಧಾನಸಭಾ ಸ್ಪೀಕರ್ ಪೀಠದಲ್ಲಿ ಕುಳಿತು ತನ್ನ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸಿ ಸರ್ವ ಪಕ್ಷದ ಶಾಸಕರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವ ಬದಲು ಖಾದರ್ ಅವರು ಒಂದು ಧರ್ಮವನ್ನು ದ್ವೇಷಿಸುವ ರೀತಿಯ ಹೇಳಿಕೆಯನ್ನು ನೀಡಿ ಜನರಿಂದ ಆಯ್ಕೆಯಾಗಿರುವ ಓರ್ವ ಜನಪ್ರತಿನಿಧಿಯ ಸಹಿತ ಕ್ಷೇತ್ರದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಅವಮಾನಿಸಿರುವುದು ಖೇದಕರ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟದ ಇತರ ಕೆಲವು ಸಚಿವರಂತೆ ಖಾದರ್ ಅವರು ಕೂಡಾ ಪ್ರಚಾರದ ಗೀಳಿಗಾಗಿಯೋ ಅಥವಾ ಕಾಂಗ್ರೆಸ್ ಹೈಕಮಾಂಡನ್ನು ಮೆಚ್ಚಿಸಲಿಕ್ಕಾಗಿಯೋ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯಾಗಿ ರಾಜ್ಯ ಸರಕಾರದ ದಿವಾಳಿತನವನ್ನು ಮುಚ್ಚಿಡಲು ಈ ರೀತಿಯಾಗಿ ವರ್ತಿಸಿದ್ದಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪಾರಂಪರಿಕವಾಗಿ ಉಡುಪಿ ಪರ್ಯಾಯದ ಪೂರ್ವ ಸಿದ್ಧತೆಗಳ ಕುರಿತು ಅನುದಾನದ ಬಗ್ಗೆ ಪ್ರಶ್ನೆ ಕೇಳಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ನಡೆ ಸಮರ್ಥನೀಯವಾಗಿದೆ. ಇತರ ಧರ್ಮಗಳ ವಿಶೇಷ ಆಚರಣೆಗಳ ಕಾರ್ಯಕ್ರಮಗಳ ಕುರಿತು ಅನುದಾನ ಕೇಳಿದಾಗ ಕೂಡಾ ಸ್ಪೀಕರ್ ಖಾದರ್ ಅವರು ಸದನದಲ್ಲಿ ಇದೇ ರೀತಿಯ ಉದ್ದಟತನ ಪ್ರದರ್ಶಿಸುತ್ತಾರೋ ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಪೀಕರ್ ಸ್ಥಾನವೆಂದರೆ ವಿರೋಧ ಪಕ್ಷದ ಶಾಸಕರನ್ನು ಹೆಣೆಯಲು ಅಥವಾ ಅವರ ಆತ್ಮ ಗೌರವವನ್ನು ಕೆಣಕಿ ಅವಮಾನಿಸಲು ಇರುವ ವೇದಿಕೆ ಎಂದು ಸ್ಪೀಕರ್ ಖಾದರ್ ಅವರು ತಿಳಿದಂತಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಅವರು ಕೂಡಲೇ ಉಡುಪಿಯ ನಾಗರಿಕರ ಹಾಗೂ ಸಮಸ್ತ ಹಿಂದೂ ಸಮಾಜದ ಬಹಿರಂಗ ಕ್ಷಮೆ ಕೋರಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.