spot_img

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಸ್‌ಪಿ ಡಾ.ಅರುಣ್‌ರವರಿಂದ ಪೊಲೀಸ್ ಇಲಾಖೆಗೆ ಖಡಕ್ ವಾರ್ನಿಂಗ್ !

Date:

spot_img

ಮಂಗಳೂರು : ಮಂಗಳೂರಿನಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಾ. ಅರುಣ್ ಅವರು ಗಂಭೀರ ವಾರ್ನಿಂಗ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಎಎಸ್ಐ, ಹೆಡ್‌ಕಾನ್ಸ್ಟೇಬಲ್ ಹಾಗೂ ಪಿಸಿಗಳ ಸಂಪೂರ್ಣ ವಿವರವನ್ನು ಮೇ 31ರಂದು ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಎಲ್ಲಾ ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಾಹಿತಿಯಲ್ಲಿ ತಪ್ಪು ಕಂಡುಬಂದರೆ, ಸಂಬಂಧಿತ ಠಾಣಾಧಿಕಾರಿ ಅಥವಾ ಬರಹಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಲ್ಲದೇ, ವರ್ಗಾವಣೆಯಾದರೂ ಮತ್ತೆ ಅದೇ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿರುವವರು, ಪ್ರಮೋಷನ್ ನಂತರ ಕೂಡಾ ಹಳೆ ಠಾಣೆಯಲ್ಲೇ ಮುಂದುವರೆದವರು, ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದರೆ ಅವರ ಮಾಹಿತಿ, ಹಾಗೆಯೇ ನಿವೃತ್ತಿಗೆ 2 ವರ್ಷದೊಳಗೆ ಇರುವ ಸಿಬ್ಬಂದಿಯ ವಿವರಗಳನ್ನು ಕೂಡಾ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಪೊಲೀಸ್ ವರ್ಗಾವಣೆ ಸೇರಿದಂತೆ ಸಂಯೋಜನೆ ಗೊಂದಲದ ವಿಚಾರಗಳು ಪ್ರಚಲಿತದಲ್ಲಿದ್ದು , ಇದೀಗ ಉಡುಪಿ ಎಸ್ಪಿಯಾಗಿ ಜನಪ್ರಿಯತೆ ಗಳಿಸಿದ್ದ ಡಾ. ಅರುಣ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಮೊದಲ ದಿನವೇ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಇಲಾಖೆಯೊಳಗಿನ ಶಿಸ್ತು ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ ಮತ್ತು ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ..

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕ ಭೇಟಿ ರದ್ದು, ಆದರೆ ಶಸ್ತ್ರಾಸ್ತ್ರ ಖರೀದಿ ಸ್ಥಗಿತವಾಗಿಲ್ಲ: ಕೇಂದ್ರದ ಸ್ಪಷ್ಟನೆ

ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ವಂದೇ ಭಾರತ್ ಹಾಗೂ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ, ಆಗಸ್ಟ್ 10 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮೂಡಿಗೆರೆ ಬಳಿ ಭೀಕರ ಅಪಘಾತ: ಅಪರಿಚಿತ ವಾಹನದ ಡಿಕ್ಕಿ, 5 ದನಗಳ ಸಾವು, 7ಕ್ಕೆ ಗಂಭೀರ ಗಾಯ

ಅಪರಿಚಿತ ವಾಹನದ ಡಿಕ್ಕಿಯಿಂದ 5 ದನಗಳು ಸ್ಥಳದಲ್ಲೇ ಸಾವನ್ನಪ್ಪಿ, 7 ದನಗಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ-ಹೆಬ್ಬರಿಗೆ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ರಾಜ್ಯಕ್ಕೆ ಮಳೆ ಎಚ್ಚರಿಕೆ: ಕರಾವಳಿ ಮತ್ತು ಉತ್ತರ ಕರ್ನಾಟಕ ಸೇರಿ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.