ಭಾನುವಾರ, ಫೆಬ್ರವರಿ 2: ಸಿನಿಮಾ ರಂಗದ ಜನಪ್ರಿಯ ಗಾಯಕ ಸೋನು ನಿಗಮ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರು ಮುಂಬೈನ ಒಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪೂಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಗಾಯಕನಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದ್ದು,ನೋವು ಹೆಚ್ಚಾದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಸೋನು ನಿಗಮ್ ಕೂಡಲೇ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, “ಸಂಗೀತ ಕಾರ್ಯಕ್ರಮದಲ್ಲಿ ನಾನು ವೇದಿಕೆಯಲ್ಲಿ ಓಡಾಡುತ್ತಾ ಹಾಡುತ್ತೇನೆ, ಆದರೆ ಭಾನುವಾರದ ಕಾರ್ಯಕ್ರಮದಲ್ಲಿ ಬೆನ್ನು ನೋವು ಆರಂಭವಾಯಿತು. ಮೊದಲು ಅದನ್ನು ತೀವ್ರವಾಗಿ ಪರಿಗಣಿಸದೆ, ಕಾರ್ಯಕ್ರಮ ಮುಂದುವರೆಸಿದರೂ, ನೋವು ಹೆಚ್ಚಾದ ಬಳಿಕ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಾಜರಾದೆ” ಎಂದು ತಿಳಿಸಿದ್ದಾರೆ.
ಈಗಾಗಲೇ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಸೋನು ನಿಗಮ್ ಅವರ ಅಭಿಮಾನಿಗಳು ಶೀಘ್ರವಾಗಿ ಅವರು ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ.