ಆಸ್ತಿಗಾಗಿ ತಾಯಿ ಜೀವಂತವಿದ್ದರೂ ಮರಣ ಪ್ರಮಾಣಪತ್ರ ಪಡೆದ ಮಗನ ಬಂಧನ ; ಪುರಸಭೆ ಅಧಿಕಾರಿಗೂ ನೋಟೀಸು ಜಾರಿ

Date:

spot_img

ಹಾವೇರಿ : ಮಾತೆಂದರೆ ಮಮತೆಗೂ ಮೀರಿದ ಭಾವನೆ. ಆದರೆ ಶಿಗ್ಗಾಂವಿಯಲ್ಲಿ ನಡೆದ ಈ ಘಟನೆ ತಾಯಿ–ಮಗ ಸಂಬಂಧಕ್ಕೂ ಅಪವಾದವಾಗಿದೆ. ತಾಯಿ ಜೀವಂತ ಇರುವಾಗಲೇ ಆಕೆ ಸಾವಿನ ಪ್ರಮಾಣಪತ್ರ ಪಡೆದು, ಆಸ್ತಿಯನ್ನು ತನ್ನ ಹೆಸರಿಗೆ ಪಡೆಯಲು ಯತ್ನಿಸಿದ ಪುತ್ರನನ್ನು ಶಿಗ್ಗಾಂವಿಯ ಪೊಲೀಸರು ಬಂಧಿಸಿದ್ದಾರೆ.

ಶೌಕತ್ ಅಲಿ (39) ಬಂಧಿತ ಆರೋಪಿ. ಈತ ಹುಬ್ಬಳ್ಳಿಯಲ್ಲಿ ಪತ್ನಿಯೊಂದಿಗೆ ಕಳೆದ 10 ವರ್ಷಗಳಿಂದ ವಾಸಿಸುತ್ತಿದ್ದನು. ಆದರೆ ಶಿಗ್ಗಾಂವಿಯಲ್ಲಿ ಈತನ ತಾಯಿ ಹೂರಾಂಬಿ ಜಂಗ್ಲಿ ಸಾಬ್ ಅವರ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ಜಂಟಿ ಖಾತೆಯಲ್ಲಿದ್ದು, ಅದನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಇವನು ಮಾಯಾಜಾಲ ಹರಡಿದ್ದ.

ತಮ್ಮ ಮರಣ ಪ್ರಮಾಣಪತ್ರ ಪಡೆಯಲು ಈತ ಪುರಸಭೆಯಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾನೆ. ಪುರಸಭೆ ಅಧಿಕಾರಿಯೊಬ್ಬರು ಈ ಮರಣ ಪ್ರಮಾಣಪತ್ರವನ್ನು ನೀಡಿದ್ದು, ಅವರ ವಿರುದ್ಧವೂ ನೋಟಿಸ್ ಜಾರಿ ಮಾಡಲಾಗಿದೆ.

ಇದಾದ ಬಳಿಕ ತಾಯಿ ಬದುಕಿದ್ದರೂ ತನ್ನ ಹೆಸರು ಮರಣ ಪ್ರಮಾಣಪತ್ರದಲ್ಲಿ ಇರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲಿಸ್ ಠಾಣೆಯಲ್ಲಿ ಶೌಕತ್ ಅಲಿ ವಿರುದ್ಧ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ