
ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಭಿನಯದ ಧಾರಾವಾಹಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಯ ಎರಡನೇ ಆವೃತ್ತಿಯು ಪ್ರಸಾರವಾದ ಮೊದಲ ವಾರದಲ್ಲೇ ಭಾರಿ ಯಶಸ್ಸು ಗಳಿಸಿದೆ.
ಟಿವಿ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 165.9 ಕೋಟಿ ನಿಮಿಷ ವೀಕ್ಷಣೆ ಪಡೆಯುವ ಮೂಲಕ ಧಾರಾವಾಹಿಯು ಪ್ರೇಕ್ಷಕರ ಮನ ಗೆದ್ದಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಸ್ಮೃತಿ ಇರಾನಿ ಅವರು ಬಹಳ ಸಮಯದ ನಂತರ ನಟನಾರಂಗಕ್ಕೆ ಮರಳಿರುವುದು ಈ ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ.