spot_img

ಹೃದಯಾಘಾತ ಪ್ರಕರಣಗಳ ಏರಿಕೆಗೆ ಧೂಮಪಾನವೇ ಪ್ರಮುಖ ಕಾರಣ – ತಜ್ಞರ ಅಧ್ಯಯನ ವರದಿ!

Date:

spot_img

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳ ಕುರಿತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದ 12 ತಜ್ಞರ ತಂಡವು ನಡೆಸಿದ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಮುಖ ಅಂಶವೆಂದರೆ, ಶೇ. 50ಕ್ಕಿಂತ ಹೆಚ್ಚು ಹೃದಯಾಘಾತ ಪ್ರಕರಣಗಳು ಧೂಮಪಾನಿಗಳಲ್ಲಿ ಕಂಡುಬಂದಿರುವುದು.

ತಜ್ಞರ ವರದಿಯ ಪ್ರಕಾರ, ಯುವಕರಲ್ಲಿ ಹೃದಯಾಘಾತಕ್ಕೆ ಧೂಮಪಾನವೇ ಪ್ರಮುಖ ಕಾರಣ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಡಾ. ರವೀಂದ್ರನಾಥ್ ಅವರು, 250 ಜನರ ಮೇಲೆ ನಡೆಸಿದ ಅಧ್ಯಯನದ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ. 98ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಆದರೆ, ಮಧುಮೇಹ, ಒತ್ತಡ, ಧೂಮಪಾನ ಮತ್ತು ಬೊಜ್ಜು (ಒಬೆಸಿಟಿ) ನಂತಹ ಜೀವನಶೈಲಿ ಸಂಬಂಧಿ ಕಾರಣಗಳು ಹೃದಯಾಘಾತಕ್ಕೆ ಮುಖ್ಯವಾಗಿವೆ. ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟು 251 ರೋಗಿಗಳ ಆರೋಗ್ಯ ತಪಾಸಣೆಯಲ್ಲಿ, 218 ಪುರುಷರು ಮತ್ತು 33 ಮಹಿಳೆಯರು ಸೇರಿದ್ದರು. ಇವರಲ್ಲಿ 87 ಮಂದಿಗೆ ಮಧುಮೇಹ, 102 ಮಂದಿಗೆ ರಕ್ತದೊತ್ತಡ, 35 ಮಂದಿಗೆ ಸಕ್ಕರೆ ಕಾಯಿಲೆ, 40 ಮಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಮತ್ತು 111 ಮಂದಿ ಧೂಮಪಾನಿಗಳಾಗಿದ್ದರು. 19 ಮಂದಿಗೆ ಕೋವಿಡ್ ಸೋಂಕಿನ ಇತಿಹಾಸವಿದ್ದರೂ, 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಪ್ರಸ್ತುತ, ನರವೈಜ್ಞಾನಿಕ (ನ್ಯೂರಾಲಜಿಕಲ್) ಸಮಸ್ಯೆಗಳ ಕುರಿತ ಅಧ್ಯಯನವು ನಿಮಾನ್ಸ್ (NIMHANS) ತಜ್ಞರಿಂದ ನಡೆಯುತ್ತಿದ್ದು, ಅವರ ವರದಿ ಬಂದ ಬಳಿಕ ಹೃದಯಾಘಾತಗಳ ಕುರಿತಾದ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು:

  • ಅತಿಯಾದ ಮೊಬೈಲ್ ಬಳಕೆ (ಪರೋಕ್ಷ ಸಂಬಂಧವಿರಬಹುದು)
  • ಧೂಮಪಾನ
  • ಮಧುಮೇಹ
  • ಅತಿಯಾದ ಬೊಜ್ಜು (ಒಬೆಸಿಟಿ)
  • ಹೆಚ್ಚಿದ ತೂಕ
  • ರಕ್ತದೊತ್ತಡ
  • ಒತ್ತಡಯುಕ್ತ ಜೀವನಶೈಲಿ
  • ಕೋವಿಡ್ ಸಂದರ್ಭದ ಔಷಧ ಬಳಕೆ (ಇದು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಹೊರತು ಲಸಿಕೆ ಅಲ್ಲ)
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಾಮಿನೋಸ್ ಪಿಜ್ಜಾಗೆ ದೊಡ್ಡ ದಂಡ: ಸಸ್ಯಾಹಾರಿ ಗ್ರಾಹಕನಿಗೆ ಮಾಂಸಾಹಾರ ನೀಡಿ ಭಾರೀ ಬೆಲೆ ತೆತ್ತ ಪಿಜ್ಜಾ ಕಂಪನಿ

ಸಸ್ಯಾಹಾರಿ ವ್ಯಕ್ತಿಯೊಬ್ಬರಿಗೆ ಮಾಂಸಾಹಾರಿ ಪಿಜ್ಜಾ ವಿತರಿಸಿದ ಪ್ರಕರಣದಲ್ಲಿ, ಧಾರವಾಡದ ಡಾಮಿನೋಸ್ ಪಿಜ್ಜಾ ಮಳಿಗೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹50,000 ದಂಡ ವಿಧಿಸಿದೆ.

ಜ್ಯಾಕ್ ಡಾರ್ಸೆ ಪರಿಚಯಿಸಿದ ‘ಬಿಟ್ಚಾಟ್’: ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವ ಹೊಸ ಯುಗ!

ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಬ್ಲಾಕ್ ಕಂಪನಿಯ ಸಿಇಒ ಜ್ಯಾಕ್ ಡಾರ್ಸೆ ಈಗ ಮತ್ತೊಂದು ಮಹತ್ವದ ತಂತ್ರಜ್ಞಾನ ಆವಿಷ್ಕಾರದೊಂದಿಗೆ ಮುಂಚೂಣಿಗೆ ಬಂದಿದ್ದಾರೆ. ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದೆಯೂ ಸಂವಹನ ನಡೆಸಲು ಸಾಧ್ಯವಾಗುವ "ಬಿಟ್ಚಾಟ್" ಎಂಬ ಹೊಸ ಚಾಟ್ ಅಪ್ಲಿಕೇಶನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.

ರಾಷ್ಟ್ರೀಯ ಫುಟ್ಬಾಲ್ ದಿನ

ಪ್ರತಿ ವರ್ಷ ಜುಲೈ 19 ರಂದು ರಾಷ್ಟ್ರೀಯ ಫುಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಮೆರಿಕನ್ ಫುಟ್‌ಬಾಲ್‌ನ ಶ್ರೀಮಂತ ಇತಿಹಾಸ, ಅದರ ಸಾಂಸ್ಕೃತಿಕ ಮಹತ್ವ ಮತ್ತು ಮುಂಬರುವ ಫುಟ್‌ಬಾಲ್ ಋತುವನ್ನು ಗೌರವಿಸುತ್ತದೆ.

ತೆರಿಗೆ ಇಲಾಖೆಯ ಬಿಗಿ ಕ್ರಮ: ಡಿಜಿಟಲ್ ಪಾವತಿ ವ್ಯಾಮೋಹದಿಂದ ನಗದು ವ್ಯವಹಾರಕ್ಕೆ ಮರಳಿದ ವ್ಯಾಪಾರಿಗಳು!

ಕೇಂದ್ರ ಸರ್ಕಾರದ 'ಅಚ್ಛೇ ದಿನ್' ಘೋಷಣೆಯೊಂದಿಗೆ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದ ಸಣ್ಣ ವ್ಯಾಪಾರಿಗಳು ಇದೀಗ ತೆರಿಗೆ ಇಲಾಖೆಯ ಕಠಿಣ ಕ್ರಮಗಳಿಂದ ತತ್ತರಿಸಿದ್ದಾರೆ.