ಕಾರ್ಕಳ: ಧರ್ಮಸ್ಥಳ ಯೋಜನೆಗೆ 700 ಹೊಸ ಸದಸ್ಯರ ಸೇರ್ಪಡೆ

Date:

spot_img

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಕಾರ್ಕಳ ತಾಲೂಕಿನ ಯೋಜನಾ ಕಚೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ನೂತನ ಆರ್ಥಿಕ ವರ್ಷದ ಅಂಗವಾಗಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳಿಗೆ ನೂತನ 700 ಮಂದಿ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಮತ್ತು ತಾಲೂಕಿನ ಒಕ್ಕೂಟಗಳ ಅಧ್ಯಕ್ಷರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆ ಮತ್ತು ಹಿತವಚನ:

ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಕೇತಿಕವಾಗಿ ನೂತನ 10 ಮಂದಿ ಸದಸ್ಯರಿಗೆ ಕುಟುಂಬ ಕೈಪಿಡಿ ಮತ್ತು ಗುಲಾಬಿ ಹೂವು ನೀಡಿ ಒಕ್ಕೂಟಕ್ಕೆ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ನಂತರ ಮಾತನಾಡಿದ ಅವರು, ಯೋಜನೆ ಬೆಳೆದು ಬಂದ ಹಾದಿ ಹಾಗೂ ಪೂಜ್ಯ ಧರ್ಮಾಧಿಕಾರಿಗಳು ಮತ್ತು ಅಮ್ಮನವರು ಯೋಜನೆಯನ್ನು ವಿವಿಧ ಹಂತಗಳಲ್ಲಿ ಬೆಳೆಸಿ ಮುನ್ನಡೆಸಿದ ರೀತಿಯನ್ನು ಅರ್ಥಪೂರ್ಣವಾಗಿ ವಿವರಿಸಿದರು. 30 ವರ್ಷಗಳ ಹಿಂದೆ ಕಾರ್ಕಳದಲ್ಲಿ ಯೋಜನೆ ಆರಂಭವಾದ ಸಂದರ್ಭದ ಪರಿಸ್ಥಿತಿ ಮತ್ತು ಇಂದಿನ ಅಭಿವೃದ್ಧಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

ಯೋಜನೆಯ ಸಾಧನೆಗಳ ಅಂಕಿ-ಅಂಶಗಳು:

ರಾಜ್ಯವ್ಯಾಪಿ ಹಮ್ಮಿಕೊಂಡ ವಿವಿಧ ಸಮುದಾಯಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅವರು ಈ ಕೆಳಗಿನ ಅಂಕಿ-ಅಂಶಗಳನ್ನು ಹಂಚಿಕೊಂಡರು:

  • ಕೆರೆ ಅಭಿವೃದ್ಧಿ: 930 ಕೆರೆಗಳು.
  • ಶುದ್ಧಗಂಗಾ ಘಟಕ: 540 ಘಟಕಗಳ ರಚನೆ.
  • ವಿಕಲಚೇತನರ ಸೇವೆ: 35,000 ಜನರಿಗೆ ಸಲಕರಣೆ ಒದಗಣೆ.
  • ಶಿಕ್ಷಣ ಸೇವೆ: ಸರ್ಕಾರಿ ಶಾಲೆಗಳಿಗೆ ಪ್ರತಿ ವರ್ಷ 1,000 ಶಿಕ್ಷಕರ ಒದಗಣೆ ಹಾಗೂ 60,000 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ.
  • ಹಾಲು ಉತ್ಪಾದನೆ: 5,000 ಹಾಲಿನ ಡೈರಿಗಳಿಗೆ ಅನುದಾನ.
  • ಸಾಮಾಜಿಕ ಭದ್ರತೆ: 22,000 ನಿರ್ಗತಿಕರಿಗೆ ಮಾಶಾಸನ ವಿತರಣೆ ಹಾಗೂ 660 ಅನಾಥರಿಗೆ ವಾತ್ಸಲ್ಯ ಮನೆ ರಚನೆ.
  • ಧಾರ್ಮಿಕ ಮತ್ತು ಸಾಮಾಜಿಕ ಸಹಾಯ: 100 ಅನಾಥಾಶ್ರಮಗಳಿಗೆ ಸಹಾಯ, 17,000 ದೇವಸ್ಥಾನಗಳಿಗೆ ಧನಸಹಾಯ ಹಾಗೂ 784 ರುದ್ರಭೂಮಿಗಳಿಗೆ ಸಿಲಿಕಾನ್ ಒದಗಣೆ.

ತಾಂತ್ರಿಕ ಮಾಹಿತಿ ಮತ್ತು ಅಧ್ಯಕ್ಷೀಯ ಭಾಷಣ:

ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿರವರು ಸಂಪೂರ್ಣ ಸುರಕ್ಷಾ ನೋಂದಣಿ, ಹಿಡುವಳಿ/ವಾರ್ಷಿಕ ಯೋಜನೆಯ ಅನುಷ್ಠಾನ, ಬ್ಯಾಂಕ್ ನಿಯಮಾವಳಿಗಳು ಮತ್ತು ಸಂಘದ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಮಂಜುನಾಥ್ ಬೈಲೂರು ಮಾತನಾಡಿ, “ಒಕ್ಕೂಟದ ಪದಾಧಿಕಾರಿಗಳು ಕ್ಷೇತ್ರದ ಕೊಂಡಿಯಾಗಿ ಒಟ್ಟಾಗಿ ಕೆಲಸ ಮಾಡೋಣ. ಪೂಜ್ಯರ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಉಜ್ವಲವಾಗಿ ಬೆಳಗಲಿ” ಎಂದು ಶುಭಹಾರೈಸಿದರು.

ಗಣ್ಯರ ಉಪಸ್ಥಿತಿ:

ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಕಮಲಾಕ್ಷ ನಾಯಕ್, ವಲಯ ಅಧ್ಯಕ್ಷರುಗಳಾದ ಶ್ರೀ ಸದಾನಂದ ಆಚಾರ್ಯ, ಶ್ರೀ ನೋಣು, ಶ್ರೀ ಜಯ, ಶ್ರೀ ಅಶ್ವಥ್ ನಾರಾಯಣ್, ಶ್ರೀ ವಿದ್ಯಾನಂದ ಹಾಗೂ ಶ್ರೀ ಪ್ರವೀಣ್ ಹೆಗ್ಡೆ ಉಪಸ್ಥಿತರಿದ್ದರು.

ತಾಲೂಕಿನ 58 ಒಕ್ಕೂಟಗಳ ಅಧ್ಯಕ್ಷರು ಹಾಗೂ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಭಾಗವಹಿಸಿದ್ದರು. ಯೋಜನಾಧಿಕಾರಿ ಶ್ರೀ ಬಾಲಕೃಷ್ಣ ಹಿರಿಯಂಜ ಸ್ವಾಗತಿಸಿದರು, ಮೇಲ್ವಿಚಾರಕ ಶ್ರೀ ದಿನೇಶ್ ಹೆಗ್ಡೆ ವಂದಿಸಿದರು ಮತ್ತು ಶ್ರೀಮತಿ ಯಶೋದ ಕಾರ್ಯಕ್ರಮ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ