ಪರ್ಕಳ: ಎಸ್‌ಎಸ್‌ಎಲ್‌ಸಿ ಉಚಿತ ಟ್ಯೂಷನ್ ಸಮಾರೋಪ; ವಿದ್ಯಾರ್ಥಿಗಳಿಗೆ ಸನ್ಮಾನ

Date:

spot_img

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ಉಡುಪಿ ತಾಲೂಕು ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಣಿಪಾಲ ವಲಯದ ಪರ್ಕಳ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮೂರು ತಿಂಗಳ ಉಚಿತ ಟ್ಯೂಷನ್ ತರಗತಿಗಳ ಸಮಾರೋಪ ಸಮಾರಂಭವು ಇತ್ತೀಚೆಗೆ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ ಮಾತನಾಡಿ, “ಸರ್ಕಾರಿ ಶಾಲೆಯ ಮಕ್ಕಳಿಗೆ ದೈನಂದಿನ ಪಾಠಗಳ ಜೊತೆಗೆ ಪೂರಕವಾಗಿ ನೀಡಲಾದ ಈ ಟ್ಯೂಷನ್ ಕ್ಲಾಸ್ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿದೆ. ಹಿಂದಿನ ಪರೀಕ್ಷೆಗಳಿಗಿಂತ ಈ ಬಾರಿ ಮಕ್ಕಳು ಉತ್ತಮ ಅಂಕಗಳನ್ನು ಪಡೆದಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಹ್ಮಾವರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ಸುರೇಶ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆಯ ಕೆಲಸಗಳನ್ನು ಗ್ರಾಮಾಭಿವೃದ್ಧಿ ಯೋಜನೆಯು ಅಚ್ಚುಕಟ್ಟಾಗಿ ಮಾಡುತ್ತಿದೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಈ ಯೋಜನೆ ದಾರಿದೀಪವಾಗಿದೆ ಎಂದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಬಿ. ಅರುಣಾಚಲ ಹೆಗ್ಡೆ, ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀ ಸತ್ಯಾನಂದ ನಾಯಕ್, ಮುಖ್ಯೋಪಾಧ್ಯಾಯ ಶ್ರೀ ಆನಂದ ನಾಯ್ಕ ಮತ್ತು ಟ್ಯೂಷನ್ ಶಿಕ್ಷಕಿ ಕುಮಾರಿ ಮಂಗಳಾ ಶೆಣೈ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಳೆದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕ ಬಾಲಚಂದ್ರ ನಿರೂಪಿಸಿದರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು ಮತ್ತು ಶಿಕ್ಷಕ ಮನೋಹರ್ ವಂದಿಸಿದರು. ಸೇವಾ ಪ್ರತಿನಿಧಿ ಶುಭಾವತಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಡಿಗೆ ಸಂಗಾತಿ ಉದ್ಯಮ: ಒಂಟಿತನಕ್ಕೆ ತಾತ್ಕಾಲಿಕ ಪರಿಹಾರವೇ?

ಬೆಳೆಯುತ್ತಿರುವ ಬಾಡಿಗೆ ಸಂಗಾತಿ ಸಂಸ್ಕೃತಿಯ ಸಂಪೂರ್ಣ ವಿಶ್ಲೇಷಣೆ ಮತ್ತು ಉದ್ಯಮದ ಪ್ರಮುಖ ವಿವರಗಳು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.