
ಪ್ರಯಾಗರಾಜ್ : ಮಹಾ ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ನಿನ್ನೆ ಬೆಳಗಿನ ಜಾವ 2 ಗಂಟೆಯಿಂದಲೇ ಲಕ್ಷಾಂತರ ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಜೆ 4 ಗಂಟೆ ವೇಳೆಗೆ 1.32 ಕೋಟಿ ಭಕ್ತರ ಆಗಮನ ದಾಖಲಾಗಿದ್ದು, ಮಹಾಕುಂಭಮೇಳದ 45 ದಿನಗಳ ಅವಧಿಯಲ್ಲಿ ಒಟ್ಟಾರೆ 65 ಕೋಟಿಗೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.
3 ಲಕ್ಷ ಕೋಟಿ ರೂ. ಆರ್ಥಿಕ ಲಾಭ!
ಈ ಬೃಹತ್ ಧಾರ್ಮಿಕ ಉತ್ಸವಕ್ಕಾಗಿ ಸರ್ಕಾರ 7,500 ಕೋಟಿ ರೂ. ವೆಚ್ಚ ಮಾಡಿದ್ದು, ರಾಜ್ಯದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭವಾಗಿದೆಯೆಂದು ಸಿಎಂ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.