
ಉಡುಪಿ: ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಮತ್ತು ಯುವಕರ ಕಣ್ಮಣಿಯಾಗಿದ್ದ ಸೀತಾನದಿ ರಮೇಶ್ ಹೆಗ್ಡೆ (58) ಅವರು ನಿನ್ನೆ ಸಂಜೆ ಸೀತಾನದಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿರಿಯ ಕಾಂಗ್ರೆಸ್ ಧುರೀಣ ಸೀತಾನದಿ ವಾಸುದೇವ ಹೆಗ್ಡೆ ಅವರ ಪುತ್ರರಾದ ರಮೇಶ್ ಹೆಗ್ಡೆ ಅವರ ನಿಧನಕ್ಕೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಅವರು ಪತ್ನಿ, ಓರ್ವ ಪುತ್ರ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.



































