spot_img

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಕಾರ್ಕಳ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಮು೦ಬಾಗ ಏಕಕಾಲದಲ್ಲಿ ಧರಣಿ ಸತ್ಯಾಗ್ರಹ- ನವೀನ್ ನಾಯಕ್

Date:

spot_img

ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳಾಗಿದ್ದು ಆಡಳಿತಕ್ಕೆ ಬಂದಾಗಿನಿ೦ದ ರಾಜ್ಯದಲ್ಲಿ ಜನವಿರೋಧಿ ನೀತಿಗಳಿಂದಲೇ ವಿಶೇಷವಾಗಿ ಗುರುತಿಸಿಕೊಂಡಿರುವುದು ದುರಾದೃಷ್ಟಕರ ಅದರಲ್ಲಿಯೂ ಕರಾವಳಿ ಜಿಲ್ಲೆಗಳನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ.

ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಇದರ ವತಿಯಿಂದ ಸರಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ ಈಗಾಗಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಜನರನ್ನು ಸೇರಿಸಿ ಕಾರ್ಕಳ ತಾಲೂಕು ಕಛೇರಿ ಮುಂಭಾಗ ಒಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಈ ಲಜ್ಜೆಗೆಟ್ಟ ಸರಕಾರ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಅದೇ ಜನವಿರೋಧಿ ನೀತಿಯನ್ನು ಮುಂದುವರೆಸಿರುವುದು ಖಂಡನೀಯ.

ಜನಸಾಮಾನ್ಯರು ಎದುರಿಸಿತ್ತಿರುವ 9/11 ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸರಕಾರ ಇನ್ನು ಯಾವುದೇ ಆಸಕ್ತಿ ತೋರಿಸದಿರುವುದು, ನಮೂನೆ 50-53 ಮತ್ತು 57 ರ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಯ ಗಮನಕ್ಕೆ ಬಾರದೆ ಏಕಾಏಕಿ ಅಧಿಕಾರಿ ಮಟ್ಟದಲ್ಲಿ ತಿರಸ್ಕರಿಸುತ್ತಿದ್ದಾರೆ. ಇದರಿಂದಾಗಿ ಅನಾಧಿಕಾಲದಿಂದಲೂ ಕೃಷಿಮಾಡಿಕೊಂಡು ಬರುತ್ತಿರುವ ಬಡ ರೈತರು ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜೊತೆಗೆ ಕರಾವಳಿ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು, ಕಲ್ಲು ಹಾಗೂ ಕೆಂಪು ಕಲ್ಲು ನಿರ್ಭಂಧ ಮಾಡಿರುವುದರಿಂದ ಜನಸಾಮನ್ಯರಿಗೆ ಹಾಗೂ ಅದನ್ನೇ ನಂಬಿಕೊಂಡು ಇರುವ ಕಾರ್ಮಿಕರಿಗೆ ತೊಂದರೆಯಾಗಿದೆ.

ವೃದ್ಧರಿಗೆ ಆಸರೆಯಾಗಿದ್ದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳನ್ನು ಅನರ್ಹಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರ ಜೊತೆಗೆ ವಿದ್ಯುತ್ ಬೆಲೆ ಏರಿಕೆ ಹೀಗೆ ಹಲವಾರು ಜನವಿರೋಧಿ ನೀತಿಗಳನ್ನು ಖಂಡಿಸುವ ಉದ್ದೇಶದಿಂದ ಉಡುಪಿ-ದ.ಕ ಜಿಲ್ಲೆಗಳ 399 ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು ಈ ನಿಟ್ಟಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಎದುರುಗಡೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕದಂಬಿನಿ ಗಂಗೂಲಿ ಜನ್ಮದಿನ

ವೈದ್ಯಕೀಯ ಶಿಕ್ಷಣಕ್ಕೆ ಹೊಸ ದಾರಿ: ಕದಂಬಿನಿ ಗಂಗೂಲಿ ಅವರ ಜನ್ಮದಿನ

ದಾಂಪತ್ಯ ಬಿರುಕಿನ ನಡುವೆಯೂ ಪತಿ ಅಜೇಯ್ ಜೊತೆ ಸಂಸಾರ ಮರುಕಟ್ಟಲು ಬಯಸಿದ ಪತ್ನಿ ಸ್ವಪ್ನಾ

ನ್ಯಾಯಾಲಯದ ಬದಲಿಗೆ ಸಂಸಾರ ಉಳಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ ಪತ್ನಿ

ಹಾಸ್ಯದ ಅಲೆಯಲ್ಲಿ ನೂರು ಕೋಟಿ ಗಳಿಸಿದ ‘ಸು ಫ್ರಮ್ ಸೋ’: ಕರಾವಳಿಯ ಹಿರಿಮೆಗೆ ಹೊಸ ಕಿರೀಟ

ಸು ಫ್ರಮ್ ಸೋ' ದರ್ಶನದಿಂದ ಕನ್ನಡ ಚಿತ್ರರಂಗಕ್ಕೆ ಹೊನ್ನಿನ ದಿನಗಳು