
ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ 2025ರ ಆಗಸ್ಟ್ 17ರಂದು (ರವಿವಾರ) ಸಿಂಹ ಸಂಕ್ರಮಣ ಮಹೋತ್ಸವ ಭಕ್ತಿಭಾವದಿಂದ ಜರಗಲಿದೆ.
ಈ ದಿನ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸುವಂತೆ ಶ್ರೀ ಅನಂತಪದ್ಮನಾಭ ದೇವಸ್ಥಾನ, ಪೆರ್ಡೂರು ಇದರ ಕಾರ್ಯನಿರ್ವಹಣಾಧಿಕಾರಿಗಳು , ಅರ್ಚಕರು , ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿ ಮತ್ತು ಸಿಬ್ಬಂದಿ ವರ್ಗ ಭಕ್ತಾದಿಗಳನ್ನು ಆಹ್ವಾನಿಸಿದ್ದಾರೆ.