
ಬೈಲೂರು : ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ( ರಿ) ಕಾರ್ಕಳ ತಾಲೂಕಿನ ಬೈಲೂರು ವಲಯದ ನೀರೆಕಣಜಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ರುದ್ರಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು ಈ ಮಂಜೂರಾತಿ ಪತ್ರವನ್ನು ಉಡುಪಿ ಜಿಲ್ಲಾ ಗೌರವಾನ್ವಿತ ನಿರ್ದೇಶಕರಾದ ಶ್ರೀಯುತ ನಾಗರಾಜ್ ಶೆಟ್ಟಿಯವರು , ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಉದಯ್ ಕುಮಾರ್ ಹೆಗ್ಡೆಯವರ ಉಪಸ್ಥಿತಿಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಸಚ್ಚಿದಾನಂದ ಪ್ರಭುರವರಿಗೆ ಹಸ್ತಾಂತರಿಸಿ, ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನೀರೆಕಣಜಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಯುತ ವಿಕ್ರಂ ಹೆಗ್ಡೆಯವರು ಉಪಸ್ಥಿತರಿದ್ದು, ಯೋಜನೆಯಿಂದ ಜನರಿಗೆ ಸಿಗುವ ಉತ್ತಮ ಸೌಲಭ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಇಂತಹ ಅಭಿವೃದ್ಧಿ ಕೆಲಸಗಳ ಬಗ್ಗೆ ಎಲ್ಲ ಜನಸಾಮಾನ್ಯರಿಗೆ ತಿಳಿಯುವಂತಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಯವರಾದ ಶ್ರೀಯುತ ಬಾಲಕೃಷ್ಣ ಹಿರಿಂಜ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ಮಾಲಿನಿ ಜೆ ಶೆಟ್ಟಿ, ಶ್ರೀಯುತ ರವೀಂದ್ರ ನಾಯಕ್ ನೀರೆ, ಶ್ರೀಯುತ ತಾರಾನಾಥ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಂಕಿತ ನಾಯಕ್, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ, ಒಕ್ಕೂಟದ ಅಧ್ಯಕ್ಷರು, ನಿಕಟ ಪೂರ್ವ ಅಧ್ಯಕ್ಷರು, ಪಂಚಾಯತ್ ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಯಶೋಧರವರು ನಿರೂಪಿಸಿ , ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಂಕಿತರವರು ಧನ್ಯವಾದ ನೆರವೇರಿಸಿದರು.



































