
ಮುಂಬೈ: ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ‘ಸಿಕಂದರ್’ ಬಾಕ್ಸ್‌ಆಫೀಸ್‌ನಲ್ಲಿ ಮೊದಲ ದಿನವೇ ನಿರೀಕ್ಷೆಗೂ ಕಡಿಮೆ ಪ್ರತಿಕ್ರಿಯೆ ಪಡೆದಿದೆ. ಭಾನುವಾರ ಬಿಡುಗಡೆಗೊಂಡ ಈ ಚಿತ್ರವು ₹200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದರೂ, ಬಿಡುಗಡೆ ದಿನ ಭಾರತದೊಳಗೆ ಕೇವಲ ₹26 ಕೋಟಿ ಮಾತ್ರ ಸಂಗ್ರಹಿಸಿದೆ.
2023ರಲ್ಲಿ ಬಿಡುಗಡೆಯಾದ ‘ಟೈಗರ್ 3’ ಮೊದಲ ದಿನವೇ ₹44.50 ಕೋಟಿ ಗಳಿಸಿದ್ದನ್ನು ಹೋಲಿಸಿದರೆ, ‘ಸಿಕಂದರ್’ ಆರಂಭಿಕ ಪ್ರದರ್ಶನದಿಂದಲೇ ಹಿನ್ನಡೆ ಅನುಭವಿಸಿದೆ.
ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಕಥೆ, ಗತಿಯ ಕೊರತೆ ಮತ್ತು ನಿರೂಪಣೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಲ್ಲದೆ, ಆನ್‌ಲೈನ್‌ನಲ್ಲಿ ಸಿನಿಮಾಗೆ ಸೋರಿಕೆಯಾದ ಪರಿಣಾಮ ಬಾಕ್ಸ್‌ಆಫೀಸ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಬಹು ನಿರೀಕ್ಷಿತ ತಾರಾಗಣ, ದೊಡ್ಡ ಬಜೆಟ್ ಮತ್ತು ಪ್ರಚಾರದ ನಡುವೆಯೂ ಮೊದಲ ದಿನದ ನಿರಾಸಾಜನಕ ಕಲೆಕ್ಷನ್ ಚಿತ್ರದ ಯಶಸ್ಸು ಕುರಿತು ಪ್ರಶ್ನೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.