spot_img

ದಿಲ್ಲಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ: ರಾಜಕೀಯ ಚಟುವಟಿಕೆ ಗರಿಗೆದರಲಿದೆಯೇ?

Date:

spot_img

ಬೆಂಗಳೂರು: ಯುಗಾದಿ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿಗೆ ತೆರಳಲಿದ್ದಾರೆ. ಈ ಭೇಟಿಯು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲ್ಪಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿವೆ ಎಂಬ ಸೂಚನೆಗಳು ಲಭ್ಯವಾಗುತ್ತಿವೆ.

ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಅವರ ದಿಲ್ಲಿ ಭೇಟಿಯ ವೇಳೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಚಿವರ ಕಾರ್ಯವೈಖರಿಯ ಮೌಲ್ಯಮಾಪನದ ವರದಿ ಈಗಾಗಲೇ ಹೈಕಮಾಂಡ್‌ ಗೆ ಸಲ್ಲಿಸಲಾಯಿತೆಂಬ ಮಾಹಿತಿ ಲಭ್ಯವಿದ್ದು,ಆ ವರದಿಯ ಆಧಾರದ ಮೇಲೆ ಆರು-ಎಂಟು ಸಚಿವರನ್ನು ಬದಲಾಯಿಸುವ ತೀರ್ಮಾನ ಕೈಗೊಳ್ಳಬಹುದು. ಈ ಕ್ರಮದಿಂದ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.

ಹೈಕಮಾಂಡ್ ಭೇಟಿಯ ರಾಜಕೀಯ ಲೆಕ್ಕಾಚಾರ
ಈಗಾಗಲೇ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ದಿಲ್ಲಿಗೆ ಭೇಟಿ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಭೇಟಿ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಮುಖ್ಯವಾಗಿ, ಖಾಲಿ ಇರುವ ವಿಧಾನ ಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಬಗ್ಗೆ ಅಂತಿಮ ತೀರ್ಮಾನ ಈ ಭೇಟಿಯ ವೇಳೆ ಕೈಗೊಳ್ಳುವ ಸಾಧ್ಯತೆ ಇದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿ.ಎಲ್. ಶಂಕರ್, ವಿ.ಎಸ್. ಉಗ್ರಪ್ಪ ಮುಂತಾದವರು ಮುಂಚೂಣಿಯಲ್ಲಿದ್ದಾರೆ.

ಹನಿಟ್ರ್ಯಾಪ್ ವಿವಾದ: ಹೈಕಮಾಂಡ್‌ ನಲ್ಲಿ ಚರ್ಚೆ
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ಕೆ.ಎನ್. ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಪ್ರಕರಣದ ಬಗ್ಗೆ ಸಿಎಂ ಅವರು ಹೈಕಮಾಂಡ್‌ ಗೆ ವಿವರ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಈ ವಿಚಾರದಲ್ಲಿ ಹೈಕಮಾಂಡ್ ಗಮನ ಸೆಳೆದಿದ್ದರು. ಪಕ್ಷದ ಒಳಗಡೆ ಚರ್ಚಿಸಬೇಕಾದ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಪುನರ್ ರಚನೆ : ಸಿಎಂ ಭವಿಷ್ಯ ನಿಗದಿಯಾಗಬಹುದಾ?
ಮೇ 20ರಂದು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬಲಿದ್ದು, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಾಧ್ಯತೆ ಇದೆ. ಹೈಕಮಾಂಡ್‌ ಈ ನಿರ್ಧಾರಕ್ಕೆ ಒಪ್ಪಿಕೊಂಡರೆ, ಸಿದ್ದರಾಮಯ್ಯ ಅವರ ಮುಂದಿನ ಅಧಿಕಾರ ಗದ್ದುಗೆ ಗಟ್ಟಿ ಎನ್ನಬಹುದು. ಇಲ್ಲವಾದರೆ, “ಅಧಿಕಾರ ಹಸ್ತಾಂತರ” ಚರ್ಚೆಗೆ ಪುನರ್ಜೀವ ಸಿಗಲಿದೆ, ಇದು ಡಿಕೆಶಿ ಬಣಕ್ಕೆ ಬಲ ನೀಡುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಮತ್ತೆ ಜೀವಂತ?
ಸಿಎಂ ಬಣದಿಂದ ನಿರಂತರ ಕೇಳಿಬರುತ್ತಿರುವ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪ, ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿಯಿಂದ ಮತ್ತಷ್ಟು ಗಟ್ಟಿ ಆಗುವ ಸಾಧ್ಯತೆ ಇದೆ. ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸಿಎಂ ಹೈಕಮಾಂಡ್ ಮುಂದೆ ಈ ಪ್ರಸ್ತಾಪವನ್ನು ಇಡಲಿದ್ದಾರೆ ಎನ್ನಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದ ಗೋವಿಂದೂರಿನಲ್ಲಿ ಭೀಕರ ಗಾಳಿ ಮಳೆಗೆ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಕುಸಿತ

ಇಂದು ಮದ್ಯಾಹ್ನ 3:00 ಸುಮಾರಿಗೆ ಬಿರುಸಿನ ಗಾಳಿ ಮಳೆಗೆ ಕಾರ್ಕಳದ ಗೋವಿಂದೂರಿನ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ನುಚ್ಚುನೂರಾಗಿದೆ.

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.