
ಬೆಂಗಳೂರು: “ರಾಹುಲ್ ಗಾಂಧಿ ಅವರು ಪಕ್ಷದ ರಾಷ್ಟ್ರೀಯ ನಾಯಕರು. ಅವರ ಭೇಟಿಯಲ್ಲೇನು ತಪ್ಪು ಇದೆ?” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ದೆಹಲಿ ಪ್ರವಾಸದ ಸಂದರ್ಭಗಳಲ್ಲಿ ಹಲವು ನಾಯಕರನ್ನು ಭೇಟಿಯಾಗುತ್ತೇನೆ. ಈ ಬಾರಿ ಕೂಡ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದೇನೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೂಡ ಅವರನ್ನು ಭೇಟಿಯಾಗಿರುವುದು ಸಹಜ” ಎಂದು ತಿಳಿಸಿದ್ದಾರೆ.
ಅಲ್ಲದೇ, ವಿಧಾನ ಪರಿಷತ್ತಿನ ಸ್ಥಾನಗಳ ಬಗ್ಗೆಯೂ ಮಾತನಾಡಿದ ಡಿಸಿಎಂ, “ಇನ್ನೂ ಈ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ಚರ್ಚೆ ಆರಂಭವಾದ ನಂತರ ಪ್ರಸ್ತಾಪ ಮಾಡುತ್ತೇವೆ” ಎಂದು ವಿವರಿಸಿದರು.