
ಕಾರ್ಕಳ : ಕಾರ್ಕಳದ ನೀರೆ ಮೂಡುಮಠದ ನಿವಾಸಿ, ಶಿಕ್ಷಕ ಹಾಗೂ ಧಾರ್ಮಿಕ ಸೇವಾಕರ್ತರಾಗಿದ್ದ ಶ್ರೀಪತಿ ಭಟ್ (69) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಮಡಿಬೆಟ್ಟು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶ್ರೀಪತಿ ಭಟ್, ಉಡುಪಿ ಮತ್ತು ಕಾರ್ಕಳದ ಅನೇಕ ದೇವಸ್ಥಾನಗಳ ಉತ್ಸವಗಳಲ್ಲಿ ಗೌರವಾನ್ವಿತ ಸ್ಥಾನವಾದ ‘ಬ್ರಹ್ಮವಾಹಕ’ರಾಗಿ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಉತ್ಸವಗಳಲ್ಲಿ ದೇವರ ಬಲಿಮೂರ್ತಿಯನ್ನು ಹೊತ್ತು ಉತ್ಸವ ಬಲಿಯನ್ನು ನೆರವೇರಿಸುವ ಮೂಲಕ ಅವರು ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಗೌರವ ಗಳಿಸಿದ್ದರು.