
ಉಡುಪಿ : ಉಡುಪಿಯ ಸಂತೆ ಕಟ್ಟೆಯಲ್ಲಿ ಶೀಹರಿ ನೇತ್ರಾಲಯ ಉದ್ಘಾಟನಾ ಸಮಾರಂಭವು 22-09-2025 ರಂದು ಮುಂಜಾನೆ 10.00 ಗಂಟೆಗೆ ನೆರವೇರಿತು.
ಈ ಪ್ರಯುಕ್ತ ಶ್ರೀಹರಿ ನೇತ್ರಾಲಯದ ವೈದ್ಯರಾದ ಡಾ. ಹರಿಪ್ರಸಾದ್ ಒಕುಡ (M B B S MS FAICO ) , ಡಾ. ರೂಪಶ್ರೀ (M B B S MS FICO ) , ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರು ರಿಕ್ಷಾ ಮಾಲಕರ, ಚಾಲಕರ ಸಂಘ, ಸಂತೆಕಟ್ಟೆ ಬ್ರಹ್ಮಶ್ರೀ ಸಂಜೀವಿನಿ ಒಕ್ಕೂಟ ಕಲ್ಯಾಣಪುರ ಗ್ರಾಮ ಪಂಚಾಯತ್ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಡುಪಿ ಎಸ್.ಕೆ.ಡಿ.ಆರ್.ಡಿ.ಪಿ.ಇವರ ಸಹಭಾಗಿತ್ವದೊಂದಿಗೆ ಉಚಿತ ನೇತ್ರ ತಪಾಸಣೆಯನ್ನು ಆಯೋಜಿಸಲಾಗಿತ್ತು.

ಈ ತಪಾಸಣಾ ಕಾರ್ಯಕ್ರಮದಲ್ಲಿ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಕನ್ನಡಕದ ವ್ಯವಸ್ಥೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಯಿತು.ಅನೇಕ ಮಂದಿ ಈ ತಪಾಸಣಾ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಕೊಂಡರು.




































