


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು.ಬೈಲೂರ್ ವಲಯದ ಕಣoಜಾರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗಿರಿಜಾ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅವರ ವಾಸಕ್ಕೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯದೊಂದಿಗೆ “ವಾತ್ಸಲ್ಯ “ಎಂಬ ನಾಮಾಂಕಿತದೊಂದಿಗೆ ಆಸರೆ ಮನೆಯನ್ನು ಹಸ್ತಾಂತರ ಮಾಡಲಾಯಿತು.
ಹಿರಿಯರು ಹಾಗೂ ಕಾರ್ಕಳ ತಾಲೂಕು ಜನ ಜಾಗೃತಿ ವೇದಿಕೆ ಸದಸ್ಯರಾದ ಕಮಲಾಕ್ಷ ನಾಯಕ್ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಿ ಸಿ ಟ್ರಸ್ಟ್ (ರಿ )ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿ ಯವರು ಗಣ್ಯರ ಉಪಸ್ಥಿತಿಯಲ್ಲಿ ಶುಭ ಹಾರೈಸಿ “ವಾತ್ಸಲ್ಯ” ಎಂಬ ಮನೆಯನ್ನು ಹಸ್ತಾಂತರ ಮಾಡಿದರು.
ಶ್ರೀಮತಿ ಗಿರಿಜಾರವರು ನಿರ್ಗತಿಕರಾಗಿದ್ದು ಯಾರ ಆಸರೆಯೂ ಇಲ್ಲದೇ ಮೂಲಭೂತ ಸೌಕರ್ಯವಿಲ್ಲದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇವರಿಗೆ ವಯಸ್ಸಾಗಿದ್ದು ದುಡಿಯಲು ಅಶಕ್ತರಾಗಿದ್ದರು. ಇವರ ಸಮಸ್ಯೆಯನ್ನು ಅರಿತ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ ಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೆರವಿಗಾಗಿ ಮನವಿ ಮಾಡಿಕೊಂಡಿದ್ದರು. ಇವರ ಮನವಿಗೆ ಸ್ಪಂದಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇವರಿಗೆ ಪ್ರತಿ ತಿಂಗಳು ರೂ 1000 ಮಾಶಾಸನದ ಮೂಲಕ ಆರ್ಥಿಕ ನೆರವನ್ನು ನೀಡುವುದರ ಜೊತೆಗೆ ಅವರ ಕಷ್ಟವನ್ನು ಅರಿತು ಅವರಿಗೆ ಸೂರನ್ನು ಒದಗಿಸುವ ಮೂಲಕ ಉತ್ತಮ ಕಾರ್ಯವನ್ನು ಮಾಡಿದೆ. ಧರ್ಮಸ್ಥಳದ ಈ ಕಾರ್ಯಕ್ರಮಕ್ಕೆ ಅಲ್ಲಿ ಸೇರಿರುವ ಊರಿನ ಗಣ್ಯರು ಉತ್ತಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಕಾರ್ಯಕ್ರಮ ಎಲ್ಲರಿಗೂ ಮಾದರಿಯೆಂದು ಕ್ಷೇತ್ರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಣoಜಾರು ಪ್ರಮುಖರು,ಪೂಜಾ ಸಮಿತಿಯ ಅಧ್ಯಕ್ಷರಾದ ವಿಕ್ರಂ ಹೆಗ್ಡೆ, ಆಡಳಿತ ಮೊಕ್ತೇಸರರಾದ ಸುಧೀರ್ ಹೆಗಡೆ, ಕಾರ್ಕಳ ತಾಲೂಕು ಯೋಜನಾಧಿಕಾರಿವರಾದ ಹೇಮಲತಾ, ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ, ಆಡಳಿತ ಸಮಿತಿಯರಾದ ಮಹೇಶ್ ಹೆಗ್ಡೆ ಮತ್ತು ನಿತ್ಯ ಹೆಗ್ಡೆ, ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ತಾರಾನಾಥ್ ಶೆಟ್ಟಿ, ಕೇಂದ್ರ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಬೈಲೂರು ಹಾಗೂ ಒಕ್ಕೂಟದ ಅಧ್ಯಕ್ಷರಾದ ರತ್ನಾಕರ್ ಕುಲಾಲ್, ಮಾಜಿ ಒಕ್ಕೂಟದ ಅಧ್ಯಕ್ಷರಾದ ಅಬ್ದುಲ್ ಸಲಾಂ ನಿಕಟಪೂರ್ವ ಅಧ್ಯಕ್ಷರಾದ ಬಾಲಚಂದ್ರ ನಾಯಕ್, ಕಾರ್ಕಳ ತಾಲೂಕು ಜ್ಞಾನವಿಕಾಸ ಸಮನ್ವಯಧಿಕಾರಿ ಲಕ್ಷ್ಮೀ ,ಸೇವಾಪ್ರತಿನಿಧಿ ಪೂಜಾ ಹಾಗೂ ವಲಯದ ಅಧ್ಯಕ್ಷರು ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬೈಲೂರ್ ವಲಯದ ಮೇಲ್ವಿಚಾರಕರಾದ ಯಶೋಧಾ ರವರು ನಿರೂಪಿಸಿದರು