
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಕಾರ್ಕಳ ತಾಲೂಕು
ಕುಕ್ಕುಂದೂರು ಹಾಲು ಉತ್ಪಾದನಾ ಸಹಕಾರಿ ಸಂಘದ ಹೊಸ ಕಟ್ಟಡ ರಚನೆಗಾಗಿ ಕ್ಷೇತ್ರದಿಂದ ಮಂಜೂರಾದ 2 ಲಕ್ಷ ರೂಪಾಯಿಯ ಮಂಜೂರಾತಿ ಪತ್ರವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಕಮಲಾಕ್ಷ ನಾಯಕ್ ಮತ್ತು ವೃಷಭರಾಜ್ ಕಡಂಬ, ತಾಲೂಕು ಜನಜಾಗ್ರತಿ ವೇದಿಕೆಯ ಸದಸ್ಯರಾದ ಉದಯ ಕುಮಾರ್ ವಿ ಶೆಟ್ಟಿ ಹಾಗೂ ತಾಲೂಕಿನ ಯೋಜನಾಧಿಕಾರಿಯವರಾದ ಹೇಮಲತಾರವರು ಹಾಲು ಉತ್ಪಾದಕ ಸಂಘದ ಅಧ್ಯಕ್ಷರು/ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ಸದಸ್ಯರಾದ ಯೋಗಿಶ್ ಸಾಲಿಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರವೀಂದ್ರ ಕುಮಾರ್ ರವರು ಈ ಕಟ್ಟಡದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಣದ ಅವಶ್ಯಕತೆ ಇದ್ದಾಗ ಮಂಜೂರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಒಕ್ಕೂಟದ ಅಧ್ಯಕ್ಷರಾದ ಜಯಶೆಟ್ಟಿ, ಆನಂದ ಪೂಜಾರಿ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿ,ಒಕ್ಕೂಟದ ಪದಾಧಿಕಾರಿಗಳು,ಹಾಲು ಉತ್ಪಾದನಾ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು ಹಾಗೂ ಹಾಲು ಉತ್ಪಾದನಾ ಸಂಘದ ಸದಸ್ಯರು ಸ್ವಾಗತಿಸಿ ವಂದಿಸಿದರು.