
ಓಂ ಶ್ರೀ ಮಂಜುನಾಥಾಯ ನಮಃ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಜ್ಞಾನದೀಪ ಹಾಗೂ ಪೂಜ್ಯರ ವಿಶೇಷ ಅನುದಾನ ಕಾರ್ಯಕ್ರಮದ ಅಡಿಯಲ್ಲಿ ಪೀಠೋಪಕರಣಗಳ ಕೊರತೆ ಇರುವ ಸರಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚುಗಳನ್ನು ಒದಗಿಸಲಾಗುತ್ತಿದೆ. ಬಜಗೋಳಿ ಸರಕಾರಿ ಪ್ರೌಢ ಶಾಲೆಗೆ ಮಂಜೂರಾದ ಹತ್ತು ಜೊತೆ ಡೆಸ್ಕ್ ಬೆಂಚುಗಳ ವಿತರಣಾ ಕಾರ್ಯಕ್ರಮವನ್ನು ಇವತ್ತು ಹಮ್ಮಿಕೊಳ್ಳಲಾಯಿತು. ಜನ ಜಾಗೃತಿ ವೇದಿಕೆ ತಾಲೂಕು ಸದಸ್ಯರಾದ ಮಹಾವೀರ ಜೈನ್ ರವರು ಡೆಸ್ಕ್ ಬೆಂಚ್ ಗಳನ್ನು ವಿತರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಇನ್ನಷ್ಟು ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳು ದೊರಕುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿಗಳಾದ ಹೇಮಲತಾ ರವರು ಸಮುದಾಯದಡಿಯಲ್ಲಿ ಶಾಲೆಗಳಿಗೆ ಸಿಗುವಂತಹ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ಹರಿಶ್ಚಂದ್ರ ತೆಂಡೂಲ್ಕರ್, ಕೃಷ್ಣ ಶೆಟ್ಟಿ,, ಹಾಗೂ ಶಾಲಾ ಮುಖ್ಯ ಶಿಕ್ಷಕರು, SDMC ಸದಸ್ಯರು , ಶೌರ್ಯ ವಿಭಾಗದ ನವೀನ್, ಬಜಗೋಳಿ ವಲಯದ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ, ಇನ್ನಿತರರು ಉಪಸ್ಥಿತರಿದ್ದರು.