



ಶ್ರೀ ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕಾರ್ಕಳ ಇದರ ವತಿಯಿಂದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ರೆಫ್ರೀಜರೇಟರ್ ಹಾಗೂ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು . ಸುನಿಲ್ ಕುಮಾರ್ ಅವರು ಮಾತನಾಡಿ ಸಂಘ ಸಂಸ್ಥೆಗಳು ಈ ರೀತಿ ಕೊಡುಗೆಗಳನ್ನು ನೀಡುವುದರಿಂದ ಹಲವಾರು ಬಡಜನರಿಗೆ ಉಪಯೋಗವಾಗುತ್ತದೆ. ಎಲ್ಲವನ್ನೂ ಸರಕಾರದಿಂದ ಭರಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಿ ಸಂಘಕ್ಕೆ ಶುಭವನ್ನು ಹಾರೈಸಿದರು. ಸಂಘದ ಅಧ್ಯಕ್ಷರು ಮಾತನಾಡಿ ಸಂಘವು ಈ ಹಿಂದೆಯೂ ಸರಕಾರಿ ಆಸ್ಪತ್ರೆಗೆ ಕೊರೋನ ಸಂದರ್ಭದಲ್ಲಿ ಆಮ್ಲಜನಕ ಘಟಕಕ್ಕೆ ಧನ ಸಹಾಯ ನೀಡಿರುತ್ತದೆ ಹಾಗೂ ಇನ್ನಿತರ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದರು. ಹಾಗೆಯೇ ಶಾಸಕರ ಸರ್ವ ರೀತಿಯ ಸಹಕಾರ ಸಂಘಕ್ಕೂ ಇರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶ್ರೀಮತಿ ಶಶಿಕಲಾ ಸಹ ವೈದ್ಯರಾದ ಡಾ| ಶ್ರೀ ಅನಂತ್ ಕಾಮತ್, ಡಾ| ಶ್ರೀ ಉದಯ ಕುಮಾರ್ , ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀ ವೃಷಭರಾಜ್ ಕಡಂಬ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ,ನಿರ್ದೇಶಕ ರಾದ ಶ್ರೀಯೋಗಿಶ್ ಸಾಲಿಯಾನ್, ಶ್ರೀ ಸಂದೀಪ್ ನಾಯಕ್, ಶ್ರೀದಿನೇಶ್ ಕುಮಾರ್, ವೈ.ಶ್ರೀ ಅನಿಲ್ ಕುಮಾರ್ ಸಂಘದ ಸಿಬ್ಬಂದಿಯವರು ಹಾಗೂ ಆಸ್ಪತ್ರೆ ಸಿಬ್ಬಂದಿಯವರು ಉಪಸ್ಥಿತರಿದ್ದರು