spot_img

ಪಿಯುಸಿ ಮೌಲ್ಯಮಾಪಕರ ಸಂಭಾವನೆ ಬಿಡುಗಡೆ ಮಾಡಲು ಶಶೀಲ್ ಜಿ ನಮೋಶಿ ಆಗ್ರಹ

Date:

spot_img

ಕಲಬುರ್ಗಿ: ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ನಾಲ್ಕು ತಿಂಗಳು ಕಳೆದಿದ್ದರೂ ಈವರೆಗೆ ಮೌಲ್ಯಮಾಪಕರ ಸಂಭಾವನೆ ಮತ್ತು ಭತ್ಯೆ ಬಿಡುಗಡೆ ಮಾಡದ ಸರಕಾರದ ಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕ ಅನುದಾನ ರಹಿತ ಉಪನ್ಯಾಸಕರು ಸ್ವತಃ ತಮ್ಮ ಕೈಯಿಂದ ದುಡ್ಡು ಖರ್ಚು ಮಾಡಿಕೊಂಡು ಮೌಲ್ಯ ಮಾಪನ ಕಾರ್ಯಕ್ಕೆ ಹಾಜರಾಗಿದ್ದಾರೆ. ಓಡಾಟದ ಖರ್ಚು ವಸತಿ ವ್ಯವಸ್ಥೆಗೆ 10 ರಿಂದ 15000 ರೂಪಾಯಿಗಳಷ್ಟು ಖರ್ಚು ಮಾಡಿಕೊಂಡಿದ್ದಾರೆ. ಮೊದಲೇ ಆರ್ಥಿಕವಾಗಿ ಸಮಸ್ಯೆ ಇರುವ ಅವರಿಗೆ ಸಾಲ ಸೋಲ ಮಾಡಿ ಮೌಲ್ಯ ಮಾಪನ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ ಆದರೆ ಸರ್ಕಾರ ಉಪನ್ಯಾಸಕರ ಜೊತೆ ಈ ರೀತಿ ವರ್ತಿಸುವದು ಸರಿ ಅಲ್ಲ.

ಮೌಲ್ಯಮಾಪಕರಿಗೆ ಸಂಭಾವನೆ ಬಿಡುಗಡೆಗೊಳಿಸುವ ಸಂಬಂಧ ಮೇ ತಿಂಗಳಿನಲ್ಲಿಯೇ ರಾಜ್ಯ ಸರಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ 78 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಆದರೂ, ಪರೀಕ್ಷೆ 1, 2 ಮತ್ತು 3ರ ಯಾವುದೇ ಸಂಭಾವನೆ ಬಿಡುಗಡೆ ಮಾಡದೆ ಸತಾಯಿಸುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೊದಲ ಎರಡು ಪರೀಕ್ಷೆಗಳ ಸಂಭಾವನೆ ಬಿಡುಗಡೆ ಮಾಡಿಲ್ಲವೆಂಬ ಕಾರಣದಿಂದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮೂರನೇ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಕರೆ ನೀಡಿತ್ತು. ಆ ವೇಳೆ ಮಂಡಳಿ ಅಧ್ಯಕ್ಷರು ಡಿಬಿಟಿ ವಿಧಾನದ ಮೂಲಕ ತ್ವರಿತವಾಗಿ ಸಂಭಾವನೆಯನ್ನು 4 ವಾರಗಳಲ್ಲಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರಿಂದ ಉಪನ್ಯಾಸಕರು ಭರವಸೆ ನಂಬಿ 3 ನೇ ಪರೀಕ್ಷೆಯ ಮೌಲ್ಯಮಾಪನ ಯಶಸ್ವಿಯಾಗಿ ನೇರವೇರಿಸಿದರು. ಆದರೆ ಅವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿಯಿತು. ಈವರೆಗೂ ಮೌಲ್ಯಮಾಪಕರ ಸಂಭಾವನೆ ಬಿಡುಗಡೆ ಮಾಡಿಲ್ಲ. 2023 ಮತ್ತು 2024ರಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿತ್ತು. ಪ್ರತಿ ವರ್ಷವೂ ಮಂಡಳಿಯು ಇದೇ ರೀತಿ ನಡೆಸಿಕೊಳ್ಳುತ್ತಿದೆ. ಇದರ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಮೌಲ್ಯಮಾಪನಕ್ಕಾಗಿ ಆಗಮಿಸಿದ್ದವರು ಊಟ, ವಸತಿ ಮತ್ತು ಸಾರಿಗೆ ವೆಚ್ಚ ಭರಿಸಿದ್ದಾರೆ. ಆದ್ದರಿಂದ ಕೂಡಲೇ ಸಂಭಾವನೆ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಆಗ್ರಹಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಹೊಸ UPI ಮಾರ್ಗಸೂಚಿಗಳು

ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆಯಲ್ಲಿ ಆಗಸ್ಟ್ 1, 2025 ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ (NPCI) ಘೋಷಿಸಿದೆ.

ಪಿಡಿಎ ಇಂಜಿನಿಯರಿಂಗ್ ಕಾಲೇಜು ಕಲಬುರ್ಗಿ ಮತ್ತು ಐಐಐಟಿ ಧಾರವಾಡ ಜೊತೆ ಒಪ್ಪಂದ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ್ ಕಾಲೇಜು ಹಾಗೂ ಧಾರವಾಡದ ಐಐಐಟಿ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಪಾರ್ಮೆಶನ ಟೆಕ್ನಾಲಜಿ) ನಡುವೆ ಪರಸ್ಪರ ಶೈಕ್ಷಣಿಕ ಒಪ್ಪಂದ ಏರ್ಪಟ್ಟಿತು.

“ರಕ್ತದಾನವು ಅತ್ಯಂತ ಪುಣ್ಯದ ಕಾರ್ಯ”: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ವಿಧಾನಪರಿಷತ್ ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಎಳ್ಳಾರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತವೆನ್ನುವುದು ಪುಣ್ಯಕ್ಷೇತ್ರ : ಅಕ್ಷಯ ಗೋಖಲೆ ಕಾರ್ಗಿಲ್ ವಿಜಯ ದಿವಸ ‘ಮೌಲ್ಯಸುಧಾ’ದಲ್ಲಿ ಅಭಿಮತ

ನಾವು ಬದುಕಿನಲ್ಲಿ ಸಾಧನೆ ಮಾಡಿದರೂ ಸಹ ಬದುಕು ದೇಶಕ್ಕೆ ಸಮರ್ಪಿತವಾಗಿರಲಿ ಎಂದು ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ನುಡಿದರು.