
ಕುದಿಗ್ರಾಮ: ಕುದಿಗ್ರಾಮ ಕೊಂಡಾಡಿ ಶ್ರೀ ದುರ್ಗಾ ಅಂಬಾಭವಾನಿ ದೇವಸ್ಥಾನದಲ್ಲಿ 2025ರ ಸೆಪ್ಟೆಂಬರ್ 22ನೇ ಸೋಮವಾರದಿಂದ ಅಕ್ಟೋಬರ್ 2ನೇ ಗುರುವಾರದವರೆಗೆ ಶರನ್ನವರಾತ್ರಿ ಉತ್ಸವ ಹಾಗೂ ಚಂಡಿಕಾಯಾಗ ಭಕ್ತಿಪೂರ್ಣವಾಗಿ ನಡೆಯಲಿದೆ.

ಆ ಪ್ರಯುಕ್ತ ಭಕ್ತಾಭಿಮಾನಿಗಳೆಲ್ಲರೂ ಸಕುಟುಂಬಿಕರಾಗಿ ಬಂದು, ಸರ್ವ ರೀತಿಯಿಂದ ಸಹಕರಿಸಿ, ಪೂಜಾ ವಿಧಿವಿಧಾನಗಳು ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ , ಶ್ರೀ ಭಗವತಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೆ. ಹರೀಶ ಭಟ್ , ಅರ್ಚಕರಾದ ಶ್ರೀ ಕೆ. ನಾರಾಯಣ ಬೆನ್ಕರ್ , ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಶಿವರಾಮ ಶೆಟ್ಟಿ , ಕಾರ್ಯದರ್ಶಿಗಳಾದ ಶ್ರೀ ಕೆ. ಪ್ರಸನ್ನ ಹೆಗ್ಡೆ , ಕೋಶಾಧಿಕಾರಿಗಳಾದ ಶ್ರೀ ಕೆ. ವಾಸು ಪೂಜಾರಿ , ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ 82 ಕುದಿಗ್ರಾಮದ ಗ್ರಾಮಸ್ಥರು ವಿನಂತಿಸಿದ್ದಾರೆ.