
ಬೆಂಗಳೂರು: ಶಂಕರಿ ಪ್ರತಿಷ್ಠಾನ (ರಿ.) ಮಡಿಲು ಆಶ್ರಮದ ವಾರ್ಷಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ. ಹಂಸಲೇಖ, ರಂಗಭೂಮಿ ಕಲಾವಿದೆ ಹಾಗೂ ಚಿತ್ರನಟಿ ಡಾ. ಗಿರಿಜಾ ಲೋಕೇಶ್, ರಾಜ್ಯಸಭಾ ಸದಸ್ಯ ಕೆ. ನಾರಾಯಣ್, ಪದ್ಮಶಾಲಿ ಸಂಘದ ಮುಖ್ಯಸ್ಥ ಎಸ್.ಆರ್. ನರಸಿಂಹಯ್ಯ, ಹಾಗೂ ಆಶ್ರಮದ ಸ್ಥಾಪಕಿ ಸರೋಜಮ್ಮ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ , ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಇವರ ಸಾಧನೆಗೆ ಗೌರವದ ನಮನ ಸಲ್ಲಿಸಲಾಯಿತು.