spot_img

ಆಗಸ್ಟ್ 10ರಂದು ಎಂ.ಜಿ.ಎಂ ಕಾಲೇಜ್ ನ ಮುದ್ದಣ ಮಂಟಪದಲ್ಲಿ “ಶಾಂಭವಿ 222 ಸಂಭ್ರಮ”

Date:

spot_img

ಉಡುಪಿ : ತುಳು ಹಾಗೂ ಕನ್ನಡ ರಂಗಭೂಮಿಗೆ ಕಳೆದ 12 ವರ್ಷಗಳಿಂದ ದಿ.ಅಲೆವೂರು ಶೇಖರ್ ಪೂಜಾರಿಯವರ ಸಾರಥ್ಯದಲ್ಲಿ ಅದ್ಭುತ ಕಲಾಕಾಣಿಕೆಗಳನ್ನು ನೀಡುತ್ತಾ ಬಂದಿರುವ ಕಲಾತಂಡ ಅಭಿನಯ ಕಲಾವಿದರು, ಉಡುಪಿ. ಪ್ರಸ್ತುತ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಇವರ ಸಾರಥ್ಯದಲ್ಲಿ, ಯತೀಶ್ ಕುಮಾರ್ ಅಲೆವೂರು ಇವರ ಗೌರವ ಸಲಹೆಯೊಂದಿಗೆ, ಉಮೇಶ್ ಅಲೆವೂರು ಇವರ ಅಧ್ಯಕ್ಷತೆಯಲ್ಲಿ, ತುಳುನಾಡ ರತ್ನ ದಿನೇಶ್ ಅತ್ತಾವರ್ ಇವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಈ ತಂಡದ ಈ ಬಾರಿಯ ಸೂಪರ್ ಹಿಟ್ ನಾಟಕ “ಶಾಂಭವಿ” ಇದರ 222 ನೇ ಪ್ರದರ್ಶನವು ರಂಗಪಯಣ ಹಾಗೂ ಅಭಿನಯ ಕಲಾವಿದರು ಉಡುಪಿ ಇದರ ಸಹಭಾಗಿತ್ವದಲ್ಲಿ, ಎಚ್.ಎಸ್ ಪ್ರಾಪರ್ಟೀಸ್ ಇವರ ಪ್ರಾಯೋಜಕತ್ವದಲ್ಲಿ ಹಾಗೂ “ಸುಪ್ರೀಂ ಸೂರ್ಯ 100% ತೆಂಗಿನ ಎಣ್ಣೆ, ಲಕ್ಷ್ಮೀಶ್ಯಾಂ ಡೆವೆಲಪರ್ಸ್, ರಿಯೂನಿಯನ್, ಎಸ್.ವಿ ಸರ್ವಿಸಸ್ ಇವರ ಸಹಪ್ರಾಯೋಜಕತ್ವದಲ್ಲಿ “ಶಾಂಭವಿ 222 ಸಂಭ್ರಮ” ವಿಜೃಂಭಣೆಯಿಂದ ಆಗಸ್ಟ್ 10 ಸಂಜೆ 4 ರಿಂದ ರಾತ್ರಿ 10 ರ ವರೆಗೆ ಎಂ.ಜಿ.ಎಂ ಕಾಲೇಜ್ ನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ತಂಡ “ಸ್ಮಾರ್ಟ್ ಗೈಸ್ ಡಾನ್ಸ್ ಅಕಾಡೆಮಿ” ಇವರಿಂದ ನೃತ್ಯ ಕಾರ್ಯಕ್ರಮ, ಹಲವಾರು ಪ್ರಶಸ್ತಿ ವಿಜೇತ ತಂಡ “ಪ್ರಶಂಸಾ, ಕಾಪು” ಇವರಿಂದ ಹಾಸ್ಯ ಕಾರ್ಯಕ್ರಮ, ಹಲವು ವಿಶ್ವದಾಖಲೆಗಳ ಮೂಲಕ ಮಿಂಚಿರುವ ಯೋಗಪಟು “ತನುಶ್ರೀ ಪಿತ್ರೋಡಿ” ಯವರಿಂದ ವಿಶೇಷ ಯೋಗ ನೃತ್ಯ, ತುಳು ಹಾಗೂ ಕನ್ನಡ ರಂಗಭೂಮಿಯ ಸಾಮಾಜಿಕ ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ರಂಗವಿನ್ಯಾಸದ ಜೊತೆಗೆ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಾಂಭವಿ ನಾಟಕದ 222 ನೇ ಪ್ರದರ್ಶನ ಅದ್ಧೂರಿಯಾಗಿ ನಡೆಯಲಿದೆ.

“ರಂಗ ಪಯಣ” ಹಾಗೂ “ಅಭಿನಯ ಕಲಾವಿದರು” ಉಡುಪಿ ಇವರು ರಂಗದಾಖಲೆಯ ಈ ಅದ್ಧೂರಿ ಸಂಗಮಕ್ಕೆ ಕಲಾಭಿಮಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವರಮಹಾಲಕ್ಷ್ಮಿ ವ್ರತ

ಈ ವ್ರತವನ್ನು ಪ್ರಮುಖವಾಗಿ ಮಹಿಳೆಯರು ತಮ್ಮ ಕುಟುಂಬದ ಸಂಪತ್ತು, ಸಮೃದ್ಧಿ, ಸೌಭಾಗ್ಯ ಮತ್ತು ಆರೋಗ್ಯಕ್ಕಾಗಿ ಶ್ರದ್ಧೆಯಿಂದ ಆಚರಿಸುತ್ತಾರೆ

ಚೀನಾದಿಂದ ವಿಶ್ವದ ಅತಿದೊಡ್ಡ ನ್ಯೂರೋಮಾರ್ಫಿಕ್ AI ಅನಾವರಣ: ಮಂಗನ ಮೆದುಳನ್ನು ಅನುಕರಿಸುವ ‘ಡಾರ್ವಿನ್ ಮಂಕಿ’!

ಚೀನಾವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದು, ವಿಶ್ವದ ಅತಿದೊಡ್ಡ ನ್ಯೂರೋಮಾರ್ಫಿಕ್ AI ವ್ಯವಸ್ಥೆ 'ಡಾರ್ವಿನ್ ಮಂಕಿ' (Darwin Monkey) ಅನ್ನು ಅನಾವರಣಗೊಳಿಸಿದೆ.

ಧರ್ಮಸ್ಥಳದ ನಂಬಿಕೆಗಳ ವಿರುದ್ಧ ಷಡ್ಯಂತ್ರ: ದೇಶದ ಒಳ-ಹೊರಗಿನ ಶಕ್ತಿಗಳ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿ!

ಧರ್ಮ ಮತ್ತು ದೇವರ ವಿಷಯದಲ್ಲಿ ಜನರ ನಂಬಿಕೆಗಳಿಗೆ ಘಾಸಿ ಮಾಡುವ ಷಡ್ಯಂತ್ರವನ್ನು ದೇಶದ ಒಳಗೆ ಹಾಗೂ ಹೊರಗಿನ ಕೆಲವು ಶಕ್ತಿಗಳು ನಡೆಸುತ್ತಿವೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಟೀಕಿಸಿದ್ದಾರೆ.

ರಕ್ಷಾ ಬಂಧನ: ಪಾಕ್ ಮೂಲದ ಸಹೋದರಿಯಿಂದ ಪ್ರಧಾನಿ ಮೋದಿಗೆ 31 ವರ್ಷಗಳ ರಾಖಿ ಬಾಂಧವ್ಯ!

ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಸತತ 31 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದಾರೆ.