spot_img

ನಂದಳಿಕೆ ಸಿರಿ ಜಾತ್ರೆಗೂ ಸೆಲ್ಫಿ ಪಾಯಿಂಟ್ ಟಚ್: ಪ್ರಚಾರದಲ್ಲಿ ಸುಹಾಸ್ ಹೆಗ್ಡೆ ಅವರ ಹೊಸ ಆಯಾಮ

Date:

spot_img

ಉಡುಪಿ ಜಿಲ್ಲೆಯ ಬೆಳ್ಮಣ್ ಹತ್ತಿರದ ನಂದಳಿಕೆಯಲ್ಲಿ ನಡೆಯುವ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆ ಪ್ರಚಾರಕ್ಕಾಗಿ ಪ್ರತೀ ವರ್ಷವೂ ವಿಭಿನ್ನ ತಂತ್ರ ಜಾರಿ ಮಾಡುವ ಸುಹಾಸ್ ಹೆಗ್ಡೆ ಅವರು ಈ ಬಾರಿಯೂ ವಿಶಿಷ್ಟ ಕ್ರಮವೊಂದನ್ನು ಅಳವಡಿಸಿದ್ದಾರೆ.

ಏಪ್ರಿಲ್ 12ರಂದು ನಡೆಯಲಿರುವ ಸಿರಿ ಜಾತ್ರೆಗಾಗಿ ಈ ಬಾರಿ “ಸೆಲ್ಸಿ ಪಾಯಿಂಟ್” ಎಂಬ ಆಕರ್ಷಕ ಆಧ್ಯಾತ್ಮ–ಡಿಜಿಟಲ್ ಸಂಯೋಜನೆಯ ಪ್ರಚಾರ ರೂಪುಗೊಂಡಿದೆ. ದೇವಸ್ಥಾನದ ಗೋಪುರದ ಆಕಾರದ ಕಟೌಟ್ ತಯಾರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ — ಬಸ್ಸು ನಿಲ್ದಾಣ, ಅಂಗಡಿಗಳ ಮುಂಭಾಗ ಸೇರಿದಂತೆ ಜನಸಂಚಾರದ ಪ್ರಮುಖ ಕಡೆಗಳಲ್ಲಿ ಇಡಲಾಗುತ್ತಿದೆ.

ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿದ್ದು, ಅತ್ಯುತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.

ಈ ಹಿಂದೆ ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಮೈಲುಗಲ್ಲು, ಭತ್ತದ ಗೋಣಿ, ಹಕ್ಕಿಗಳಿಗೆ ಮಣ್ಣಿನ ಪಾತ್ರೆ, ಅಂಚೆ ಕಾರ್ಡ್, ಕೊಡೆ ಮುಂತಾದ ವಿಶಿಷ್ಟ ರೀತಿಗಳಲ್ಲಿ ನಡೆದಿತ್ತು. ಈ ವರ್ಷ “ಸೆಲ್ಸಿ ಪಾಯಿಂಟ್” ಮೂಲಕ ಹೊಸ ಕಲ್ಪನೆಗೆ ಚಾಲನೆ ನೀಡಲಾಗಿದೆ.

ಪ್ರಚಾರ ಪರಿಕಲ್ಪನೆಯ ರೂವಾರಿ ಸುಹಾಸ್ ಹೆಗ್ಡೆ ಶುಕ್ರವಾರ ಈ ಹೊಸ ತಂತ್ರವನ್ನು ನಂದಳಿಕೆಯಲ್ಲಿ ಬಿಡುಗಡೆ ಮಾಡಿದರು. ಈ ಆಧುನಿಕ ಸೆಲ್ಫಿ ಕಾನ್ಸೆಪ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿರಿ ಜಾತ್ರೆಯ ಚರ್ಚೆಗೆ ಹೊಸ ರಸಕೊಟ್ಟಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಉಡುಪಿಯಲ್ಲಿ ವರುಣನ ಆರ್ಭಟ: ಆಸ್ತಿಪಾಸ್ತಿಗೆ ಹಾನಿ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ 24 ಗಂಟೆಗಳಿಂದ ಬಿಡದೇ ಸುರಿಯುತ್ತಿರುವ ಭಾರೀ ಗಾಳಿ ಮತ್ತು ಮಳೆಯು ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಹರಿದ್ವಾರದಲ್ಲಿ ದುರಂತ: ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿರುವ ಪ್ರಸಿದ್ಧ ಮಾನಸಾ ದೇವಿ ದೇವಾಲಯದಲ್ಲಿ ಭಾನುವಾರ (ಜುಲೈ 27) ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಲ್ಲಿ ಏಳು ಭಕ್ತರು ಪ್ರಾಣ ಕಳೆದುಕೊಂಡಿದ್ದು, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ

ರಾಜ್ಯದ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ, ಸಂಚಾರ ಸ್ಥಗಿತ

ರಾಜ್ಯದಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ