
ಬೆಂಗಳೂರು: ಮನೆಯ ಅಡುಗೆ ಮನೆಯಲ್ಲೇ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಕತ್ತರಿಸುತ್ತಿದ್ದ ವೇಳೆ ಅನಿರೀಕ್ಷಿತ ಘಟನೆ ಸಂಭವಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತರಕಾರಿ ಕಟ್ ಮಾಡುತ್ತಿದ್ದ ಮಹಿಳೆ, ಕ್ಯಾಪ್ಸಿಕಮ್ ಅನ್ನು ಅರ್ಧಭಾಗ ಮಾಡಿದಾಗ ಅದರ ಒಳಗಿಂದ ಜೀವಂತ ಚೇಳು ಹೊರಬಂದ ದೃಶ್ಯವನ್ನು ನೋಡಿ ಬೆಚ್ಚಿಬೀಳುತ್ತಾರೆ.
ಈ ವಿಚಿತ್ರ ಘಟನೆ ‘ಅಭಿ ಕ್ಯುಸಿನ್’ ಎಂಬ ಇನ್ಸ್ಟಾಗ್ರಾಂ ಪೇಜ್ನ ಮೂಲಕ ಹಂಚಿಕೊಳ್ಳಲ್ಪಟ್ಟಿದ್ದು, ಅದು ಈಗ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ, ಕ್ಯಾಪ್ಸಿಕಮ್ ನಿಂದ ಒಂದು ಡಿಶ್ ತಯಾರಿಸುತ್ತಿದ್ದ ಮಹಿಳೆ, ತರಕಾರಿ ತುಂಡುಗಳನ್ನು ತಟ್ಟೆಯಲ್ಲಿ ಇಡುತ್ತಿದ್ದಾಗ, ಒಂದು ಚೇಳು ಅವುಗಳ ಮಧ್ಯೆ ಇರುವುದನ್ನು ಗಮನಿಸುತ್ತಾಳೆ.
ಆ ಸಮಯದಲ್ಲಿ ಮಹಿಳೆ ”ದೇಖಿಯೇ ಕ್ಯಾ ದಿಖ್ ಗಯಾ… ಬಿಚ್ಚೂ, ಯಾನಿ ಕಿ ಚೇಳು!” ಎಂದು ಹೇಳುತ್ತ, ಚಾಕುವಿನಿಂದ ಚೇಳುವನ್ನು ತೋರಿಸುತ್ತಾಳೆ. ಪ್ರಾರಂಭದಲ್ಲಿ ಅದು ಸತ್ತಿರಬಹುದು ಎಂದು ಭಾವಿಸಿದರೂ, ಚಾಕುವಿನಿಂದ ತಳ್ಳಿದಾಗ ಅದು ಚಲಿಸಲು ಪ್ರಾರಂಭಿಸುತ್ತದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಅಚ್ಚರಿಯಿಂದ ಕೂಡಿದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.