spot_img

ಮೇ 29ರಿಂದ ಶಾಲೆಗಳ ಪುನರಾರಂಭ: 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ

Date:

spot_img

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮೇ 29ರಿಂದ ಶಾಲೆಗಳು ಪುನರಾರಂಭವಾಗಲಿದ್ದು, ಮೊದಲ ಅವಧಿ ಸೆಪ್ಟೆಂಬರ್ 19ರ ತನಕ ಇರಲಿದೆ. ದಸರಾ ರಜೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ ಘೋಷಿಸಲಾಗಿದೆ. ಎರಡನೇ ಅವಧಿ ಅಕ್ಟೋಬರ್ 8ರಿಂದ ಏಪ್ರಿಲ್ 10ರವರೆಗೆ ಇರುತ್ತದೆ. ಬೇಸಿಗೆ ರಜೆ ಏಪ್ರಿಲ್ 28ರಿಂದ ಆರಂಭವಾಗಲಿದೆ.

ಒಟ್ಟು ಶೈಕ್ಷಣಿಕ ವರ್ಷದಲ್ಲಿ 365 ದಿನಗಳ ಪೈಕಿ 123 ದಿನ ರಜೆಗಳು, 242 ದಿನ ಶಾಲಾ ಕರ್ತವ್ಯದ ದಿನಗಳಾಗಿರಲಿವೆ. ಈ 242 ದಿನಗಳಲ್ಲಿ:

  • 178 ದಿನ ಕಲಿಕಾ ದಿನಗಳಾಗಿ,
  • 26 ದಿನ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಕ್ಕಾಗಿ,
  • 22 ದಿನ ಪಠ್ಯೇತರ ಚಟುವಟಿಕೆಗಳಿಗಾಗಿ,
  • 10 ದಿನ ಫಲಿತಾಂಶ ವಿಶ್ಲೇಷಣೆಗೆ,
  • 4 ದಿನ ಸ್ಥಳೀಯ ರಜೆಗಳಿಗೆ ಮೀಸಲಿಡಲಾಗಿದೆ.

ಅದೇ ವೇಳೆ, 2025ರ ಏಪ್ರಿಲ್ 8ರಂದು ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಏ.9ರಂದು ಪ್ರೌಢಶಾಲೆಗಳಲ್ಲಿ ಪೋಷಕರ ಸಭೆ ಹಾಗೂ ಫಲಿತಾಂಶ ಪ್ರಕಟಣೆ ನಡೆಯಲಿದೆ. ಏ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ಸೂಚಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ತನಿಖೆಗೂ ಮುನ್ನ ಧರ್ಮಸ್ಥಳದ ತೇಜೋವಧೆ ಸಲ್ಲದು: ಸಿ.ಟಿ. ರವಿ ಎಚ್ಚರಿಕೆ!

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ.