spot_img

‘ಶಾಲಾ ಪ್ರಾರಂಭೋತ್ಸವ’: ಇಂದಿನಿಂದ ರಾಜ್ಯದಾದ್ಯಾಂತ 2025–26 ನೂತನ ಶೈಕ್ಷಣಿಕ ವರ್ಷ ಆರಂಭ

Date:

spot_img

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ 2025–26ರ ಚಟುವಟಿಕೆಗಳು ಇಂದಿನಿಂದ ರಾಜ್ಯದಾದ್ಯಾಂತ ಆರಂಭವಾಗಲಿದ್ದು, ಮಕ್ಕಳಿಗೆ ಉತ್ತಮ ಸ್ವಾಗತ ನೀಡಲು ಶಾಲೆಗಳು ಸಜ್ಜಾಗಿವೆ. ಹೊಸ ವರ್ಷದ ಮೊದಲ ದಿನದಿಂದಲೇ ತರಗತಿಗಳು ನಡೆಯಲಿದ್ದು, ಬಿಸಿಯೂಟದ ಜೊತೆಗೆ ವಿಶೇಷ ಸಿಹಿಯೂ ಮಕ್ಕಳಿಗೆ ನೀಡಲಾಗುತ್ತದೆ.

ಈ ದಿನ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ವಿತರಣೆ ನಡೆಯಲಿದ್ದು, ಶಾಲಾ ಆರಂಭದ ದಿನವೇ ಖುಷಿಯ ವಾತಾವರಣವಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬೆಂಗಳೂರಿನ ಆಡುಗೋಡಿಯ ಅಯ್ಯಪ್ಪ ಗಾರ್ಡನ್‌ನ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಶಾಲಾ ಪ್ರಾರಂಭೋತ್ಸವ’ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮಧ್ಯಾಹ್ನ 11ಕ್ಕೆ ಆರಂಭವಾಗಲಿದೆ.

ರಾಜ್ಯಾದ್ಯಂತ ಒಂದರಿಂದ ಹತ್ತನೇ ತರಗತಿವರೆಗೆ 46 ಸಾವಿರ ಸರ್ಕಾರಿ ಶಾಲೆಗಳು ನೂತನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದು, ಈ ಸಂಬಂಧಿತ ವೇಳಾಪಟ್ಟಿಯು ಈಗಾಗಲೇ ಪ್ರಕಟವಾಗಿದೆ. ಇತ್ತ ಕೆಲವು ಖಾಸಗಿ ಶಾಲೆಗಳು ಆರಂಭವಾಗಿದ್ದು, ಉಳಿದ ಶಾಲೆಗಳೂ ಗುರುವಾರದಿಂದ ಶೈಕ್ಷಣಿಕ ವರ್ಷ ಆರಂಭಿಸುತ್ತವೆ.

ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಬಿಡುಗಡೆ ಮಾಡಿದ್ದು, ಹೊಸ ವರ್ಷಕ್ಕೆ ಮುನ್ನ ಶಾಲೆಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುರಕ್ಷತಾ ಕ್ರಮಗಳ ಪಾಲನೆ, ಶಿಥಿಲ ಕಟ್ಟಡಗಳ ಪರಿಶೀಲನೆ ಮುಂತಾದ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಂಗಳೂರಿನ ಬಹುಕೋಟಿ ವಂಚನೆ ಪ್ರಕರಣ: ರೋಶನ್ ಸಲ್ಡಾನ್ಹಾ ಸಿಐಡಿ ವಶಕ್ಕೆ, ತನಿಖೆ ತೀವ್ರಗೊಂಡಿದೆ

ಅಕ್ರಮ ಹಣಕಾಸು ವಹಿವಾಟು ಹಾಗೂ ನೂರಾರು ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಬಂಧಿತನಾಗಿರುವ 43 ವರ್ಷದ ರೋಶನ್ ಸಲ್ಡಾನ್ಹಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ತಂಡವು ಇಂದು, ತನ್ನ ವಶಕ್ಕೆ ಪಡೆಯಲು ಸಿದ್ಧವಾಗಿದೆ.

ಕರ್ನಾಟಕ ಆರ್ಥಿಕ ವೃದ್ಧಿಯ ಅಗ್ರಸ್ಥಾನ: ದಶಕದಲ್ಲಿ ದ್ವಿಗುಣಗೊಂಡ ತಲಾದಾಯ

ದೇಶದ ಆರ್ಥಿಕ ಪ್ರಗತಿಯ ಪಥದಲ್ಲಿ ಕರ್ನಾಟಕವು ಮಹತ್ವದ ಸಾಧನೆ ಮಾಡಿದ್ದು, 2024-25ರ ಆರ್ಥಿಕ ವರ್ಷದಲ್ಲಿ ತಲಾದಾಯದ ವಿಷಯದಲ್ಲಿ ದೇಶದಲ್ಲೇ ಮುಂಚೂಣಿಗೆ ಬಂದಿದೆ.

ಮಧ್ಯಪ್ರದೇಶದ ಇಬ್ಬರು ಖದೀಮರು ಉಡುಪಿ ಪೊಲೀಸರ ಬಲೆಗೆ, ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳು

ಉಡುಪಿ ನಗರದ ಪ್ರತಿಷ್ಠಿತ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿ ಸಮುಚ್ಚಯದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡುಪಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ

ಉಡುಪಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣೆ: ಸಾರ್ವಜನಿಕ ಸಹಯೋಗಕ್ಕೆ ಮೆಚ್ಚುಗೆ

ಮತಿ ಭ್ರಮಣೆ ಗೊಂಡ ಅಪರಿಚಿತ ವ್ಯಕ್ತಿಯೋರ್ವ ಸಾರ್ವಜನಿಕರ ಮನೆಗೆ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್ ಸಹಾಯದಿಂದ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ