spot_img

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

Date:

spot_img

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ 18 ವರ್ಷದ ನಿರೀಕ್ಷೆಗೆ ತೆರೆ ಬೀಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವು ಆರ್‌ಸಿಬಿ ಅಭಿಮಾನಿಗಳ ನಡುವೆ ದೊಡ್ಡ ಸಂಭ್ರಮ ಹುಟ್ಟಿಸಿದೆ. ಈ ಸಂಭ್ರಮಕ್ಕೆ ಸೌಬಾಗ್ಯವಂತವಾಗಿ ಮೆಚ್ಚುಗೆ ವ್ಯಕ್ತ ಪಡಿಸಿವರು ತಂಡದ ಸ್ಥಾಪಕರಲ್ಲೊಬ್ಬರಾದ ವಿವಾದಾಸ್ಪದ ಉದ್ಯಮಿ ವಿಜಯ್ ಮಲ್ಯ.

ಆರ್‌ಸಿಬಿ ತಂಡದ ಆರಂಭಿಕ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ತಮ್ಮ ಟ್ವೀಟ್‌ನಲ್ಲಿ, “ಆರ್‌ಸಿಬಿ ಕೊನೆಗೂ ಚಾಂಪಿಯನ್ ಆಗಿದೆ. 18 ವರ್ಷಗಳ ಕನಸು ನನಸಾಗಿದೆ. ವಿರಾಟ್ ಕೊಹ್ಲಿ, ಗೇಲ್ ಮತ್ತು ಎಬಿಡಿವಿಲಿಯರ್ಸ್‌ ಮುಂತಾದ ಸ್ಟಾರ್‌ ಆಟಗಾರರನ್ನು ಆಯ್ಕೆ ಮಾಡಿದ್ದೆ. ತಂಡದ ಅಭಿಮಾನಿಗಳು ಈ ಗೆಲುವಿಗೆ ಅರ್ಹರು” ಎಂದು ಬರೆದಿದ್ದರು.

ಇದಕ್ಕೆ ಪ್ರತಿಯಾಗಿ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಮಲ್ಯರಿಗೆ ಟಾಂಗ್ ನೀಡಿದ್ದು, “ಮೊದಲು ಭಾರತಕ್ಕೆ ಬನ್ನಿ”, “ಬ್ಯಾಂಕ್ ಸಾಲ ತೀರಿಸಿ” ಎಂಬಂತಹ ಕಾಮೆಂಟ್‌ಗಳ ಮೂಲಕ ಖಟಾಸು ಹೇಳಿದರು.

ಅದರಲ್ಲಿ ಎಲ್ಲಕ್ಕಿಂತ ಗಮನಸೆಳೆದದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿದ ಪ್ರತಿಕ್ರಿಯೆ. ಎಸ್‌ಬಿಐ ಅಧಿಕೃತ ಖಾತೆಯಿಂದ, “ಸರ್… ಭಾರತಕ್ಕೆ ಬನ್ನಿ, ನಾವೆಲ್ಲಾ ಒಟ್ಟಿಗೆ ಆರ್‌ಸಿಬಿ ವಿಜಯವನ್ನು ಆಚರಿಸೋಣ” ಎಂಬ ಸಂದೇಶದೊಡನೆ ನಗುಮುಖ ಇಮೋಜಿ ಕೂಡ ಬಳಸಲಾಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ಉದ್ಯಮಿ ಹರ್ಷ ಗೋಯೆಂಕಾ ಈ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ವಿಜಯ್ ಮಲ್ಯನಿಗೆ ಭಾರತೀಯ ಬ್ಯಾಂಕುಗಳಿಗೆ ಒಟ್ಟು ₹9000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಬಾಕಿ ಇದೆ. ಅವರು ಯುಕೆಗೆ ತೆರಳಿದ ನಂತರ ಭಾರತಕ್ಕೆ ಹಿಂದಿರುಗಿಲ್ಲ. ಮಲ್ಯರನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಹಲವಾರು ಕಾನೂನು ಕ್ರಮಗಳನ್ನು ತೆಗೆದುಕೊಂಡರೂ ಫಲ ನೀಡಿಲ್ಲ.

ಈ ಬೆನ್ನಲ್ಲೇ ಅವರ ಟ್ವೀಟ್‌ಗೆ ಎಸ್‌ಬಿಐ ಪ್ರತಿಕ್ರಿಯೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರೋಗ್ಯಕ್ಕೆ ಮಾರಕವಾಗಬಲ್ಲ ದಿನನಿತ್ಯದ ಸೊಪ್ಪು: ಕಿಡ್ನಿ ಕಲ್ಲುಗಳ ಸೃಷ್ಟಿಗೆ ಪ್ರಮುಖ ಕಾರಣ!

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಮೂತ್ರಪಿಂಡಗಳು, ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತವೆ.

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಉಡುಪಿಯಲ್ಲಿ ವರುಣನ ಆರ್ಭಟ: ಆಸ್ತಿಪಾಸ್ತಿಗೆ ಹಾನಿ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ 24 ಗಂಟೆಗಳಿಂದ ಬಿಡದೇ ಸುರಿಯುತ್ತಿರುವ ಭಾರೀ ಗಾಳಿ ಮತ್ತು ಮಳೆಯು ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಹರಿದ್ವಾರದಲ್ಲಿ ದುರಂತ: ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿರುವ ಪ್ರಸಿದ್ಧ ಮಾನಸಾ ದೇವಿ ದೇವಾಲಯದಲ್ಲಿ ಭಾನುವಾರ (ಜುಲೈ 27) ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಲ್ಲಿ ಏಳು ಭಕ್ತರು ಪ್ರಾಣ ಕಳೆದುಕೊಂಡಿದ್ದು, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ