spot_img

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆ

Date:

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಅನಿಲ್ ಪೂಜಾರಿ ನೆಲ್ಲಿಗುಡ್ಡೆಯವರ ನೇತೃತ್ವದಲ್ಲಿ ಕಾರ್ಕಳ ತಾಲೂಕು ಸರ್ವಜ್ಞ ವ್ರತ್ತದ ಬಳಿ ಇರುವ ಸರ್ವಜ್ಞ ಪ್ರತಿಮೆಗೆ ದೀಪ ಬೆಳಗಿಸಿ ಹೂ ಹಾರ ಹಾಕುವ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಮಾತನಾಡಿ ತ್ರಿಪದಿ ಬ್ರಹ್ಮ ತತ್ವಜ್ಞಾನಿ ಸರ್ವಜ್ಞ ಅವರ ತತ್ವದರ್ಶಗಳು ಮನುಕುಲಕ್ಕೆ ಸದಾ ಕಾಲವು ಆದರ್ಶವಾಗಿದೆ, ಸರ್ವಜ್ಞರ ಅನುಯಾಯಿಗಳಾದ ಕುಲಾಲ ಸಮಾಜ ಬಾಂಧವರು ಜಾತ್ಯಾತೀತ ತತ್ವಗಳೊಂದಿಗೆ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕುಲಾಲ ಸಮಾಜದ ಮುಖಂಡರಾದ ಕುಶ.ಆರ್.ಮೂಲ್ಯ ಅವರು ಮಾತನಾಡಿ ಸರ್ವಜ್ಙ ಅವರು ತ್ರಿಪದಿ ಸಾಹಿತ್ಯದ ಮೇರು ಕವಿಗಳಾಗಿದ್ದು, ಸಂತಕವಿ ಎಂದೇ ಪ್ರಸಿದ್ದಿ ಪಡೆದಿದ್ದು ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮೋಹನ್, ಬ್ಲಾಕ್ ಉಪಾದ್ಯಕ್ಷರಾದ ಜಾರ್ಜ್ ಕ್ಯಾಸ್ತಲಿನೋ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಭೂನ್ಯಾಯ ಮಂಡಳಿ ಸದಸ್ಯರಾದ ಸುನೀಲ್ ಭಂಡಾರಿ, ಗ್ಯಾರಂಟಿ ಸಮಿತಿ ಸದಸ್ಯರಾದ ಪಿಲಿಪ್ ಮಸ್ಕರೇನಸ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ, ಅಕ್ರಮ ಸಕ್ರಮ ಸದಸ್ಯೆ ಸುನೀತಾ ಶೆಟ್ಟಿ, ಮಾಜಿ ಪುರಸಭಾ ಅದ್ಯಕ್ಷೆ ಪ್ರತಿಮಾ ರಾಣೆ, ವಿಶ್ವನಾಥ್ ಭಂಡಾರಿ, ಕುಕ್ಕುಂದೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ರುಕ್ಮಯ ಶೆಟ್ಟಿಗಾರ್, ಸಂತೋಷ್ ಶೆಟ್ಟಿ, ದಿನಕರ್ ಶೆಟ್ಟಿ ಪಳ್ಳಿ, ವಿಶ್ವನಾಥ್ ಪಳ್ಳಿ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ ಸ್ವಾಗತಿಸಿದರು, ಗ್ಯಾರಂಟಿ ಯೋಜನೆ ಸದಸ್ಯ ಹೇಮಂತ್ ಧನ್ಯವಾದವಿತ್ತರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.

ಸಾಂಬಾರಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು: ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕೆಂಪು ಮೆಣಸಿನಕಾಯಿ ಕೇವಲ ಆಹಾರಕ್ಕೆ ಖಾರ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಅನೇಕ ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ.

ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಅಹಲ್ಯೆ ಬಾಯಿಯರ ಸಾಹಸ ಮಹಿಳೆಯರಿಗೆ ಸ್ಪೂರ್ತಿ : ಡಾ ಮೇಘಾ ಖಂಡೇಲವಾಲ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಮಹಾವಿದ್ಯಾಲಯದ ಮಹಿಳಾ ಕೋಶ, ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿತು.

ದಾವಣಗೆರೆಯಲ್ಲಿ ರಾಜ್ಯಮಟ್ಟದ “ಕುಪ್ಮಾ” ಸಮಾವೇಶ

ಕುಪ್ಮಾದ ರಾಜ್ಯಮಟ್ಟದ ದ್ವಿತೀಯ ಸಮಾವೇಶವು 2025ರ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 12 ಮತ್ತು 13ರಂದು 'ಎಸ್. ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್, ಬಿಐಇಟಿ, ದಾವಣಗೆರೆ, ಇಲ್ಲಿ ನಡೆಯಲಿದೆ.