
ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ನಡೆಯಿತು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಅಮೃತ ಭಾರತಿ ಮಾತೃ ಮಂಡಳಿ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಶ್ಯಾಮಲಾ ವಿ ಕುಂದರ್ ಮಾತನಾಡಿ ಭಾರತವು ಸಂಸ್ಕಾರವಂತರ ದೇಶ ಎಂದು ಪ್ರಸಿದ್ಧಿಯಾಗಿತ್ತು ಆದರೆ ಪರಕೀಯ ಆಕ್ರಮಣದಿಂದ ಕಳೆಗುಂದಿತ್ತು ಮರಳಿ ಪಡೆಯಲು ನಾವು ನಮ್ಮ ಮನೆಯಲ್ಲಿಯೇ ಮಕ್ಕಳಿಗೆ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ತಿಳಿಹೇಳಬೇಕು ಎಂದು ಕುಟುಂಬ ಪ್ರಬೋಧನದಲ್ಲಿ ಮಾತೆಯರ ಪಾತ್ರದ ಬಗ್ಗೆ ವಿವರವಾಗಿ ತಿಳಿಸಿದರು.

ಮುಖ್ಯ ಅತಿಥಿ ರೇಷ್ಮಾ ಉದಯ ಶೆಟ್ಟಿ ಅವರು ಮಾತನಾಡಿ ಪರಿಸರ ಸಂರಕ್ಷಣೆ ವಿಕಸಿತ ಭಾರತ ನವ ಭಾರತ ಸ್ವಚ್ಛತೆ, ನೀರಿನ ಬಗ್ಗೆ, ತ್ಯಾಜ್ಯ ವಿಲೇವಾರಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೀತಾ ಶೆಟ್ಟಿ, ಅಭ್ಯಾಗತೆಯಾಗಿ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ , ಅನಿತಾ ಹಾಗೂ ಆಡಳಿತ ಮಂಡಳಿ ಸದಸ್ಯರು, ಮಾತೃಮಂಡಳಿ ಸದಸ್ಯರು ಮಾತೃಭಾರತಿ ಪ್ರಮುಖ್ ಮೀನಾಕ್ಷಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾತೆಯರನ್ನು ಸನ್ಮಾನಿಸಲಾಯಿತು.
ಡಾ. ಭಾರ್ಗವಿ ಆರ್ ಐತಾಳ್ ಸಪ್ತ ಶಕ್ತಿಯ ಪರಿಚಯವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಶ್ವೇತಾ ತಂತ್ರಿ ಮಡಾಮಕ್ಕಿ ಪ್ರಾರ್ಥಿಸಿ, ಉಷಾ ಹೆಬ್ಬಾರ್ ನಿರೂಪಿಸಿ, ಮೀನಾ ಭಟ್ ಸ್ವಾಗತಿಸಿ, ಕವಿತಾ ವಂದಿಸಿದರು.



































