
ಉಡುಪಿ : ಕುದಿ ಗ್ರಾಮದ ಸಾನದಪಾಡಿಯಲ್ಲಿ ನೆಲೆನಿಂತಿರುವ ದೈವಗಳಾದ ಶ್ರೀ ವರ್ತೆ ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವವು ಫೆಬ್ರವರಿ 22 ರಂದು ಭಕ್ತಿಪೂರ್ವಕವಾಗಿ ಜರುಗಲಿದೆ. ತುಳುನಾಡಿನ ದೈವಾರಾಧನೆಯ ಸಂಪ್ರದಾಯದಂತೆ ಈ ಪವಿತ್ರ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
82 ಕುದಿ ಗ್ರಾಮದ ಸಾನದಪಾಡಿ ಶ್ರೀ ದೈವಸ್ಥಾನದಲ್ಲಿ ಅಂದು ರಾತ್ರಿ 8.00 ಗಂಟೆಗೆ ನೇಮೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಗ್ರಾಮದ ಕೂಡುವಳಿಕೆದಾರರು ಹಾಗೂ ಹತ್ತು ಸಮಸ್ತರು ಒಗ್ಗೂಡಿ ನಡೆಸುವ ಈ ಸೇವೆಯಲ್ಲಿ ದೈವಗಳ ಗಗ್ಗರ ಸೇವೆ, ನರ್ತನ ಹಾಗೂ ಅಭಯ ಪ್ರದಾನದಂತಹ ವಿಶೇಷ ಆಚರಣೆಗಳು ನಡೆಯಲಿವೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಗಳ ಸಿರಿಮುಡಿ-ಗಂಧ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿ ಮತ್ತು ಹತ್ತು ಸಮಸ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



































