
ಯುನೈಟೆಡ್ ಸೋಲ್ಸ್ ಉಡುಪಿ ಆಶ್ರಯದಲ್ಲಿ ಹಿರಿಯಡಕ ಗಾಂಧೀ ಮೈದಾನದಲ್ಲಿ 2 ದಿನಗಳ ಕಾಲ ಆಶಕ್ತರ ಸಹಾಯರ್ಥವಾಗಿ ನಡೆಯುವ ಸಮ್ಮಿಲನ ಟ್ರೋಫಿ 2024 ಶನಿವಾರ ದಿನಾಂಕ 28-12-2024 ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆ ಗೊಂಡಿತು.
ಉದ್ಘಾಟನೆಯನ್ನು ಬೊಮ್ಮರಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ ನಡೆಸಿದ್ದು ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ಪ್ರಾಜೆಕ್ಟ್ ಮ್ಯಾನೇಜರ್ NIPL ಭಾಗವಹಿಸಿದ್ದು ಯುವಕರ ಹುಮ್ಮಸ್ಸು ಮತ್ತು ಅಶಕ್ತರಿಗೆ ಜೊತೆಯಾಗಿ ನಿಲ್ಲುವ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಚಲನ ಚಿತ್ರ ಕಲಾ ನಿರ್ದೇಶಕರು ಪ್ರತಿಬಿಂಬ ಕಲಾರಂಗ ಇದರ ಮುಖ್ಯಸ್ಥರಾದ ಶ್ರೀ ವರದರಾಜ ಕಾಮತ್ ಸ್ಥಳೀಯ ಉದ್ಯಮಿ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಜೈದೇವ್ ಎಂಟರ್ಪ್ರೈಸಸ್ ಮಾಲಕರು ಹಾಗೂ ಯುನೈಟೆಡ್ ಸೋಲ್ಸ್ ನಾ ಗೌರವಾಧ್ಯಕ್ಷರಾದ ಹರೀಶ್ ನಾಯಕ್, ಸಂಘಟನೆಯ ಅಧ್ಯಕ್ಷರಾದ ಸಂಪತ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಸಾದ್ ನಾಯಕ್, ಕಾರ್ಯದರ್ಶಿ ರಾಜೇಶ್ ಕುಲಾಲ್ ಉಪಸ್ಥಿತರಿದ್ದರು. ಪ್ರಮೋದ್ ನಾಯಕ್ ಸ್ವಾಗತಿಸಿ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಪೌರಕಾರ್ಮಿಕರು ಮತ್ತು ಸಮಾಜ ಸೇವಕರಿಗೆ ಸನ್ಮಾನ ಮತ್ತು ಅಶಕ್ತ ಕುಟುಂಬಕ್ಕೆ ಧನ ಸಹಾಯ ನಡೆಯಲಿದೆ.