
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆಯೊಂದು ಬಂದಿದ್ದು, ಮుంబೈನ ವರ್ಲಿಯಲ್ಲಿ ಇದ್ದ ಸಾರಿಗೆ ಇಲಾಖೆಯ ವಾಟ್ಸಾಪ್ ನಂಬರ್‌ಗೆ ಅಪರಿಚಿತ ವ್ಯಕ್ತಿಯೊಬ್ಬನು ಭಯೋತ್ಪಾದಕ ಸಂದೇಶ ಕಳಿಸಿದ್ದಾನೆ. “ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಕೊಲೆ ಮಾಡುತ್ತೇವೆ, ಅವರ ಕಾರಿಗೆ ಬಾಂಬ್ ಇಡುತ್ತೇವೆ” ಎಂಬ ತರಹದ ಬೆದರಿಕೆ ಸಂದೇಶ ಇದಾಗಿದೆ.
ಈ ಕುರಿತು ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಯ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಈ ಹೊಸ ಬೆದರಿಕೆಯ ಹಿಂದಿರುವವರ ನಿಖರ ಮಾಹಿತಿಗಾಗಿ ಪೊಲೀಸರು ತೀವ್ರ ಪರಿಶೋಧನೆ ನಡೆಸುತ್ತಿದ್ದಾರೆ.
ಈ ಹಿಂದೆ ಕೂಡ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಅಲ್ಲದೆ, ಲಾರೆನ್ಸ್ ಬಿಶ್ನೋಯ್ ಗ್ಯಾಂಗ್‌ನಿಂದ ಹಲವು ಬಾರಿ ಕೊಲೆ ಬೆದರಿಕೆ ಬಂದಿದ್ದವು. ಈ ಹಿನ್ನಲೆಯಲ್ಲಿ ಈತನ ಮೇಲೆ ನಿರಂತರ ಪೊಲೀಸರು ಕಾವಲು ವ್ಯವಸ್ಥೆ ನಡೆಸುತ್ತಿದ್ದಾರೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ, ಅವನ ವಿರುದ್ಧ ಲಾರೆನ್ಸ್ ಗ್ಯಾಂಗ್ ದ್ವೇಷ ಬೆಳೆಯಿಸಿದೆ ಎಂದು ನಂಬಲಾಗಿದೆ. ಇದೀಗ ಬಂದಿರುವ ಹೊಸ ಬೆದರಿಕೆ ಸಂದೇಶವೂ ಇದೇ ಗ್ಯಾಂಗ್‌ನಿಂದ ಬಂದಿದೆಯೇ ಎಂಬುದರ ಬಗ್ಗೆ ಪೊಲೀಸರು ಸ್ಪಷ್ಟತೆ ಪಡೆಯಲು ಮುಂದಾಗಿದ್ದಾರೆ.